ಲಕ್ನೋ(ಉತ್ತರ ಪ್ರದೇಶ): ಪ್ರಧಾನ ಕಾರ್ಯದರ್ಶಿ ನಮಾಮಿ ಗಂಗೆ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ಅನುರಾಗ್ ಶ್ರೀವಾಸ್ತವ್ ಅವರಿಗೆ 80 ಲಕ್ಷ ಹಣ ನೀಡುವಂತೆ ಸುಲಿಗೆ ಮಾಡಲು ಯತ್ನಿಸಿದ ಮೂರು ಆರೋಪಿಗಳನ್ನು ಇಲ್ಲಿನ ಸೈಬರ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಅಧಿಕಾರಿಗಳ ಕುಟುಂಬ ಮತ್ತು ಸದಸ್ಯರ ಖಾಸಗಿ ಮಾಹಿತಿಗಳನ್ನು ಹ್ಯಾಕ್ ಮಾಡಿ ಇವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೂವರು ಆರೋಪಿಗಳು ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಗಳ ಕುಟುಂಬದ ಮಾಹಿತಿ ಪಡೆದ ಮೂವರು ಆರೋಪಿಗಳು ಇಮೇಲ್ ಮೂಲಕ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದರು. ಅಮಿತ್ ಪ್ರತಾಪ್, ರಜನೀಶ್ ನಿಗಂ, ಹಾರ್ದಿಕ್ ಖನ್ನಾ ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ಕೆಲಸ ಮುಗಿದ ಬಳಿಕ ಕಚೇರಿಯಲ್ಲಿ ಸರ್ವರ್ಗಳ ಮೇಲ್ವಿಚಾರಣೆ ನಡೆಸುತ್ತಿದ್ದರು. ಅಲ್ಲದೇ, ಅವರ ಕ್ರೆಡಿಟ್ ಕಾರ್ಡ್ ಅನ್ನು ಕೂಡ ಬಳಕೆ ಮಾಡಿದ್ದಾರೆ. ಇವರು ಇಲಾಖೆ ದತ್ತಾಂಶಗಳನ್ನು ತಿರುಚುತ್ತಿದ್ದುದು ಅಧಿಕಾರಿಗಳ ಗಮನ್ಕೆ ಬಂದಿದೆ. ಬಳಿಕ ಇವರು ಪ್ರಧಾನ ಕಾರ್ಯದರ್ಶಿ ಇಮೇಲ್ ಐಡಿ ಕ್ಯಾಕ್ ಮಾಡಿ, ಕುಟುಂಬದ ನಾಲ್ವರು ಸದಸ್ಯರ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಇಮೇಲ್ ಮೂಲಕ 80 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸೈಬರ್ಕ್ರೈಮ್ ಠಾಣೆ ಮುಖ್ಯಸ್ಥ ಮೊಹಮ್ಮದ್ ತಿಳಿಸಿದ್ದಾರೆ.
ನ. 21ರಂದು ಪ್ರಧಾನ ಕಾರ್ಯದರ್ಶಿ ಕ್ರೆಡಿಟ್ ಕಾರ್ಯ ಬಳಸಿ 49,999 ರೂ ವಿದೇಶಿ ಹಣವನ್ನು ಪಡೆದಿದ್ದಾರೆ. ಈ ಅಂಶ ಗಮನಕ್ಕೆ ಬಂದಾಕ್ಷಣ ಪ್ರಧಾನ ಕಾರ್ಯದರ್ಶಿ ತಮ್ಮ ಕಾರ್ಡ್ ಬ್ಲಾಕ್ ಮಾಡಲು ಮುಂದಾಗಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಬಳಿಕ ಬ್ಯಾಂಕ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೊಲೀಸರಿಂದ ಬೆದರಿಕೆ ಆರೋಪ: ಶ್ರೀರಂಗಪಟ್ಟದಲ್ಲಿ ರಾತ್ರಿಯಿಡೀ ಹಿಂದೂ ಕಾರ್ಯಕರ್ತರ ಪ್ರತಿಭಟನೆ