ETV Bharat / crime

ಕಾರಿನಲ್ಲಿ ಬೆನ್ನಟ್ಟಿ ರಸ್ತೆ ಮಧ್ಯೆ ವಕೀಲರ ಭೀಕರ ಕೊಲೆ - ಮರ್ಡರ್ ಕೇಸ್

ವಾಹನದಿಂದ ಕೆಳಗಿಳಿದ ವಕೀಲರು, ಏಕೆ ಡಿಕ್ಕಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ವ್ಯಕ್ತಿಯೊಬ್ಬ ಬಂದು ತಪ್ಪಾಯ್ತು ಅಂತ ಕ್ಷಮೆಯಾಚಿಸಿದ್ದಾನೆ. ಆದರೆ ವಕೀಲರು ಮರಳಿ ಕಾರಿಗೆ ಹತ್ತಿ ಬಾಗಿಲು ಮುಚ್ಚುತ್ತಿರುವಾಗ ನಾಲ್ವರು ಹತ್ತಿರ ಬಂದಿದ್ದಾರೆ. ಅದರಲ್ಲಿ ಮೂವರು ಸೇರಿಕೊಂಡು ವಕೀಲರನ್ನು ಕಾರಿನಿಂದ ಹೊರಗೆಳೆದು ಸಮೀಪದ ಪೊದೆಗೆ ನೂಕಿದ್ದಾರೆ.

The horrible murder of a lawyer after being chased in a car
ಕಾರಿನಲ್ಲಿ ಬೆನ್ನಟ್ಟಿ ರಸ್ತೆ ಮಧ್ಯೆ ವಕೀಲರ ಭೀಕರ ಕೊಲೆ
author img

By

Published : Aug 2, 2022, 11:52 AM IST

ಹೈದರಾಬಾದ್: ಹನಮಕೊಂಡ ಮೂಲದ ವಕೀಲ ಮುಳಗುಂದಲ ಮಲ್ಲಾ ರೆಡ್ಡಿ (58) ಎಂಬುವರನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ನಡೆದಿದೆ. ವಕೀಲ ಮಲ್ಲಾರೆಡ್ಡಿ ಸೋಮವಾರ ಸಂಜೆ 6.30ರ ಸುಮಾರಿಗೆ ಜಮೀನು ವಿಚಾರದ ಕೆಲಸಕ್ಕೆ ಮುಳುಗು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ನಂತರ ಹನುಮಕೊಂಡಕ್ಕೆ ಹಿಂತಿರುಗುತ್ತಿದ್ದಾಗ ಅಪರಿಚಿತರು ದಾಳಿ ನಡೆಸಿ ಅವರನ್ನು ಕೊಲೆ ಮಾಡಿದ್ದಾರೆ.

Mulgundala Malla Reddy
ಕೊಲೆಗೀಡಾದ ವಕೀಲ ಮುಳಗುಂದಲ ಮಲ್ಲಾ ರೆಡ್ಡಿ

ವಕೀಲರ ಕಾರು ಚಾಲಕ ಸಾರಂಗಂ, ಇತರ ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳುವ ಪ್ರಕಾರ- ಮುಳುಗು ಮಂಡಲದ ಪಾಂಡುಕುಂಟಾ ಬಸ್ ಸ್ಟೇಜ್ ಬಳಿಯ ಸ್ಪೀಡ್ ಬ್ರೇಕರ್ ಬಳಿ ಹಿಂದಿನಿಂದ ಬಂದ ಆರೋಪಿಗಳು ಮಲ್ಲಾರೆಡ್ಡಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ವಾಹನದಿಂದ ಕೆಳಗಿಳಿದ ವಕೀಲರು, ಏಕೆ ಡಿಕ್ಕಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಆಗ ವ್ಯಕ್ತಿಯೊಬ್ಬ ಬಂದು ತಪ್ಪಾಯ್ತು ಅಂತ ಕ್ಷಮೆಯಾಚಿಸಿದ್ದಾನೆ. ಆದರೆ ವಕೀಲರು ಮರಳಿ ಕಾರಿಗೆ ಹತ್ತಿ ಬಾಗಿಲು ಮುಚ್ಚುತ್ತಿರುವಾಗ ನಾಲ್ವರು ಹತ್ತಿರ ಬಂದಿದ್ದಾರೆ. ಅದರಲ್ಲಿ ಮೂವರು ಸೇರಿಕೊಂಡು ವಕೀಲರನ್ನು ಕಾರಿನಿಂದ ಹೊರಗೆಳೆದು ಸಮೀಪದ ಪೊದೆಗೆ ನೂಕಿದ್ದಾರೆ. ನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಇದೆಲ್ಲ ಮುಗಿಯುವವರೆಗೆ, ಇನ್ನಿಬ್ಬರು ವ್ಯಕ್ತಿಗಳು ಕಾರು ಚಾಲಕನನ್ನು ಭದ್ರವಾಗಿ ಹಿಡಿದುಕೊಂಡಿದ್ದರು. ನಂತರ ಐದೂ ಜನ ಆರೋಪಿಗಳು ತಾವು ಬಂದ ಕಾರಿನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.

ತನಿಖೆಗೆ ವಿಶೇಷ ತಂಡ ರಚನೆ: ಮುಳುಗು ಎಸ್ಪಿ ಸಂಗ್ರಾಮಸಿಂಗ್ ಜಿ. ಪಾಟೀಲ, ಎಎಸ್ಪಿ ಸುಧೀರ ರಾಮನಾಥ ಕೇಕಾನ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮುಳುಗು ಎಸ್‌ಎಸ್‌ಐ ಓಂಕಾರ್ ಯಾದವ್ ಮಾತನಾಡಿ, ಕೊಲೆಯ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಕೊಲೆಗೆ ಕಾರಣ ಏನಿರಬಹುದು?: ಭೂ ವಿವಾದಗಳಿಗೆ ಸಂಬಂಧಿಸಿದಂತೆ ಮಲ್ಲಾರೆಡ್ಡಿ ಅವರು ಮುಳುಗು ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಆದರೆ, ಮಲ್ಲಾರೆಡ್ಡಿ ಅವರ ಚಲನವಲನಗಳನ್ನು ಶತ್ರುಗಳು ಸತತವಾಗಿ ಗಮನಿಸಿರಬಹುದು ಎಂದು ಶಂಕಿಸಲಾಗಿದೆ. ಮಲ್ಲಾರೆಡ್ಡಿ ಮುಳುಗು ಮಂಡಲದ ಮಲ್ಲಂಪಲ್ಲಿಯಲ್ಲಿ ಕೆಂಪು ಮಣ್ಣಿನ ಕ್ವಾರಿ ಮತ್ತು ಪೆಟ್ರೋಲ್ ಬಂಕ್ ವ್ಯವಹಾರಗಳ ಜೊತೆಗೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇವೇ ಜಮೀನುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಮಲ್ಲಾರೆಡ್ಡಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹನಮಕೊಂಡದಲ್ಲಿ ವಾಸವಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.