ETV Bharat / crime

ಕ್ರೈಸ್ತ ಆಶ್ರಮದ ಆಸ್ತಿ ವಿಚಾರಕ್ಕೆ ಗಲಾಟೆ, ಅಧ್ಯಕ್ಷನಿಂದಲೇ ಸದಸ್ಯನ ಕೊಲೆಗೆ ಸುಪಾರಿ...? - ಸ್ಟೀಫನ್ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು

ಸ್ಟೀಫನ್ ಹಲ್ಲೆ ನಡೆಸಲು ಕಾರಣ ಕ್ರಿಶ್ಚಿಯನ್ ಸಮುದಾಯದ ವೃದ್ದಾಶ್ರಮ. ಪ್ರೆಸಿಡೆಂಟ್ ಸೆಂಟ್ ವಿಲ್ಸೆಂಟ್ ಡಿ ಸೊಸೈಟಿಯ ವೃದ್ಧಾಶ್ರಮದ ಅಧ್ಯಕ್ಷ ರಾಜು ಜೋಸೆಫ್, ಸ್ಟೀಫನ್​​ ಕೊಲೆಗೆ ಸುಪಾರಿ ನೀಡಿದ್ದು, ಮಹೇಶ್ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ ಎಂದು ಸ್ಟಿಫನ್ ಸಂಬಂಧಿ ಆರೋಪಿಸಿದ್ದಾರೆ. ಮಹೇಶ್ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಾಣ ಭಯದಲ್ಲಿ ಸ್ಟೀಫನ್ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

supari-for-questioning-about-occupying-church
ಅಧ್ಯಕ್ಷನಿಂದಲೇ ಸದಸ್ಯನ ಕೊಲೆಗೆ ಸುಪಾರಿ
author img

By

Published : Jan 24, 2021, 8:04 PM IST

ಹುಬ್ಬಳ್ಳಿ: ಅದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ವೃದ್ಧಾಶ್ರಮ. ಆಶ್ರಮದ ಆಸ್ತಿ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದೆ. ಅದರಲ್ಲೂ ಆಶ್ರಮದ ಅಧ್ಯಕ್ಷ, ಸದಸ್ಯನ ಕೊಲೆಗೆ ಸುಪಾರಿ ನೀಡಿದ್ದಲ್ಲದೇ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ‌.‌‌‌

ಅಧ್ಯಕ್ಷನಿಂದಲೇ ಸದಸ್ಯನ ಕೊಲೆಗೆ ಸುಪಾರಿ

ಓದಿ: ವೃದ್ಧಾಶ್ರಮ ಜಾಗ ಕಬಳಿಕೆ ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಪಾರಿ ಆರೋಪ; ದೂರು ದಾಖಲು

ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯಲ್ಲಿ ಸ್ಟೀಫನ್ ಎಂಬಾತ ಗಡಿಯಾರದಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇವರ ಮೇಲೆ ಮಹೇಶ ಎಂಬಾತ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದು, ಅದೃಷ್ಟವಶಾತ್ ಸ್ಟೀಫನ್ ತಪ್ಪಿಸಿಕೊಂಡು ಬದುಕುಳಿದಿದ್ದಾರೆ.

ಸ್ಟೀಫನ್ ಹಲ್ಲೆ ನಡೆಸಲು ಕಾರಣ ಕ್ರಿಶ್ಚಿಯನ್ ಸಮುದಾಯದ ವೃದ್ದಾಶ್ರಮ. ಪ್ರೆಸಿಡೆಂಟ್ ಸೆಂಟ್ ವಿಲ್ಸೆಂಟ್ ಡಿ ಸೊಸೈಟಿಯ ವೃದ್ಧಾಶ್ರಮದ ಅಧ್ಯಕ್ಷ ರಾಜು ಜೋಸೆಫ್, ಸ್ಟೀಫನ್​​ ಕೊಲೆಗೆ ಸುಪಾರಿ ನೀಡಿದ್ದು, ಮಹೇಶ್ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ ಎಂದು ಸ್ಟಿಫನ್ ಸಂಬಂಧಿ ಆರೋಪಿಸಿದ್ದಾರೆ. ಮಹೇಶ್ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಾಣ ಭಯದಲ್ಲಿ ಸ್ಟೀಫನ್ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೂ ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ವೃದ್ಧಾಶ್ರಮದ ಆಡಳಿತ ಮಂಡಳಿ ಹಲವು ದಿನಗಳ ಹಿಂದೆ ಬದಲಾವಣೆ ಆಗಿದೆ.‌ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಆಯ್ಕೆಯಾದ ರಾಜು ಜೋಸೆಫ್ ಹೊಸ ಆಡಳಿತ ಮಂಡಳಿ ರಚನೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಈ ಹಿಂದೆ ಇದ್ದ ಆಡಳಿತ ಮಂಡಳಿ ಸದಸ್ಯರನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಸ್ಟೀಫನ್ ಮತ್ತು ರಾಜು ಜೋಸೆಫ್ ನಡುವೆ ಗಲಾಟೆ ನಡೆದಿದೆ. ಅದೇ ದ್ವೇಷವಿಟ್ಟುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಸ್ಟೀಫನ್ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ರಾಜು ಜೋಸೆಫ್ ಅವರನ್ನು ಕೇಳಿದರೆ ಅವರು ಹೇಳುವುದೇ ಬೇರೆ. ಹಲ್ಲೆ ಮಾಡಿರುವ ಮಹೇಶ್ ಯಾರು ಅನ್ನೋದೆ ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಮಹೇಶ್ ಎಂಬುವರು ಸ್ಟೀಫನ್ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಅಧ್ಯಕ್ಷನಾಗಿದ್ದಕ್ಕೆ ನನ್ನ ಮೇಲೆ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದು ರಾಜು ಜೋಸೆಫ್ ತಿಳಿಸಿದರು.

ಇನ್ನು ಪ್ರೆಸಿಡೆಂಟ್ ಸೆಂಟ್ ವಿಲ್ಸೆಂಟ್ ಡಿ ಸೊಸೈಟಿ ಆಸ್ತಿಯಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದ್ದು, ಆಸ್ತಿಯನ್ನು 30 ವರ್ಷಗಳ ಕಾಲ ಲೀಸ್ ಗೆ ನೀಡಲಾಗಿದೆ. ಪ್ರತಿ ವರ್ಷ 2 ಸಾವಿರ ರೂಪಾಯಿ‌ ಹಣವನ್ನು ಸೊಸೈಟಿಗೆ ಕಟ್ಟಬೇಕು. ಆದರೆ ಹೊಸದಾಗಿ ಆಯ್ಕೆಯಾದ ಜೋಸೆಫ್ ತನ್ನ ಆಡಳಿತ ಮಂಡಳಿ ರಚನೆಗೆ ಅವಕಾಶ ನೀಡದ್ದಕ್ಕೆ ಈ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಹಲ್ಲೆಯ‌ ಬಗ್ಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದಲೇ ತಪ್ಪು ಯಾರದು ಎಂದು ಹೊರಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.