ETV Bharat / crime

ರಷ್ಯನ್ ಯುನಿವರ್ಸಿಟಿಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿ.. 8 ಮಂದಿ ಬಲಿ - ರಷ್ಯನ್ ಯುನಿವರ್ಸಿಟಿ

ರಷ್ಯಾದ ಪರ್ಮ್‌ನ ವಿವಿಯೊಂದರಲ್ಲಿ ಅಪರಿಚಿತ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, 14 ಜನ ಗಾಯಗೊಂಡಿದ್ದಾರೆ.

At least 5 killed in Russian varsity shooting
ರಷ್ಯನ್ ಯುನಿವರ್ಸಿಟಿಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿಗೆ 8 ಮಂದಿ ಬಲಿ
author img

By

Published : Sep 20, 2021, 3:18 PM IST

ಮಾಸ್ಕೋ (ರಷ್ಯಾ): ಇಲ್ಲಿನ ಪರ್ಮ್​ ರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಅಪರಿಚಿತ ಬಂದೂಕುಧಾರಿಯೋರ್ವ ಮನಸೋಯಿಯಿಚ್ಛೆ ನಡೆಸಿದ ಗುಂಡಿನ ದಾಳಿಗೆ 8 ಮಂದಿ ಬಲಿಯಾಗಿದ್ದಾರೆ ಎಂದು ರಷ್ಯಾದ ತನಿಖಾ ಸಂಸ್ಥೆ ಮಾಹಿತಿ ನೀಡಿದೆ. ​

ಪರ್ಮ್​ ಪ್ರಾದೇಶಿಕ ಆರೋಗ್ಯ ಸಚಿವಾಲಯ ಸಹ ಈ ಕುರಿತು ಮಾಹಿತಿ ನೀಡಿದ್ದು, ಘಟನೆಯಲ್ಲಿ 14 ಜನರು ಗಾಯಗೊಂಡಿದ್ದು, ಗಾಯಾಳುಗಳ ನಿಖರ ಸಂಖ್ಯೆ ಬಗ್ಗೆ ತಿಳಿದುಬಂದಿಲ್ಲ ಎಂದಿದೆ. ವಿವಿಯ ಬಹುತೇಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತರಗತಿಗಳ ಬಾಗಿಲು ಹಾಕಿಕೊಂಡು ಒಳಗೆ ಸ್ವಯಂ ಬಂಧಿಯಾಗಿದ್ದಾರೆ. ಆಗಂತುಕನು, ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದಾನೆ. ಯಾರು ಕೂಡ ಕ್ಯಾಂಪಸ್​ನಲ್ಲಿ ತಿರುಗಾಡದಂತೆ ವಿವಿ ಮನವಿ ಮಾಡಿದೆ.

ಘಟನೆ ಬಳಿಕ ದುಷ್ಕರ್ಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರಷ್ಯಾದ ಸಚಿವರೊಬ್ಬರು ತಿಳಿಸಿದ್ದು, ಈ ಕಗ್ಗೊಲೆ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ.

ಈ ವೇಳೆ ಕೆಲ ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳಲು ವಿವಿ ತರಗತಿಗಳ ಕಿಟಕಿ, ಗೋಡೆಗಳನ್ನು ಜಿಗಿದಿದ್ದು, ಕೆಲವರು ಗಾಯಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.