ಚಾಮರಾಜನಗರ: ಚಾಮರಾಜನಗರದ ಎರಡು ಕಡೆ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದು, ಆಂತರಿಕ ಭದ್ರತಾ ಪಡೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಡೀಪುರ ಕಾಡಂಚಿನ ಗ್ರಾಮ ಕೆಬ್ಬೇಪುರ ಬಳಿಯ ಕರಡಿಗುಡ್ಡ ಹಾಗೂ ಚಾಮರಾಜನಗರ ತಾಲೂಕಿನ ಗಣಿಗಗೆರೆ ಸಮೀಪ ಸ್ಯಾಟ್‌ಲೈಟ್ ಮೊಬೈಲ್ ಬಳಕೆಯಾಗಿದೆ. ಆದರೆ, ಈ ಸ್ಯಾಟಲೈಟ್ ಮೊಬೈಲ್ ಬಳಸಿರುವುದು ಉಗ್ರರೋ ಅಥವಾ ನಕ್ಸಲರೋ ಎಂಬುದು ಖಚಿತವಾಗಿಲ್ಲ. ಆಂತರಿಕ ಭದ್ರತಾ ಪಡೆ ಎರಡು ಸ್ಥಳಗಳನ್ನು ಪರಿಶೀಲಿಸಿದೆ.
ಕೆಲ ತಿಂಗಳುಗಳ ಹಿಂದೆಯೂ ಸ್ಯಾಟಲೈಟ್ ಫೋನ್ ಬಳಕೆ ಪೊಲೀಸರನ್ನು ಚಿಂತೆಗೀಡು ಮಾಡಿತ್ತು. ಬಳಿಕ, ಸ್ಯಾಟಲೈಟ್ ಮೊಬೈಲ್ ಬಳಸಿದ್ದು ವಿದೇಶಿಗ ಎಂಬುದು ತಿಳಿದ ಬಳಿಕ ನಿರಾಳರಾಗಿದ್ದರು. ಈಗ ಮತ್ತೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಚಾಮರಾಜನಗರದ ಎರಡು ಕಡೆ ಸ್ಯಾಟಲೈಟ್ ಫೋನ್ ಬಳಕೆ; ನಕ್ಸಲರ ಶಂಕೆ..!
ಚಾಮರಾಜನಗರದ ಕಾಡಂಚಿನಲ್ಲಿ ಉಗ್ರರು ಅಥವಾ ನಕ್ಸಲರೋ ಇರುವ ಅನುಮಾನಗಳು ಶುರವಾಗಿವೆ. ನಗರದ ಎರಡು ಕಡೆ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದು, ಆಂತರಿಕ ಭದ್ರತಾ ಪಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.