ಮುಂಬೈ: ಬಾಲಿವುಡ್ನ ಖ್ಯಾತ ನಟಿಯೊಬ್ಬರ ಬಾಡಿಗಾರ್ಡ್ ವಿರುದ್ಧ ಅಂದೇರಿ ಡಿಎನ್ ನಗರದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಎಫ್ಐಆರ್ ಪ್ರಕಾರ...
ಬಾಡಿಗಾರ್ಡ್ವೊಬ್ಬ 30 ವರ್ಷದ ಬ್ಯೂಟಿಷಿಯನ್ಗೆ ಎಂಟು ವರ್ಷಗಳ ಹಿಂದೆ ಪ್ರಪೋಸ್ ಮಾಡಿದ್ದಾನೆ. ಇದಕ್ಕೆ ಆ ಯುವತಿ ಗ್ರೀನ್ ಸಿಗ್ನಲ್ ನೀಡಿದ್ದಳು. ಇವರ ಪ್ರೇಮ ಪುರಾಣ ಎಂಟು ವರ್ಷಗಳವರೆಗೆ ಮುಂದುವರಿದಿತ್ತು.
-
Mumbai | A case under Sec 376 (rape charges) & 420 (cheating) of IPC registered against bodyguard of a famous Bollywood actress at DN Nagar PS in Andheri. He is yet to be arrested. Complainant alleged that he promised marriage to her & took Rs 50,000: DN Nagar Police (21.05)
— ANI (@ANI) May 22, 2021 " class="align-text-top noRightClick twitterSection" data="
">Mumbai | A case under Sec 376 (rape charges) & 420 (cheating) of IPC registered against bodyguard of a famous Bollywood actress at DN Nagar PS in Andheri. He is yet to be arrested. Complainant alleged that he promised marriage to her & took Rs 50,000: DN Nagar Police (21.05)
— ANI (@ANI) May 22, 2021Mumbai | A case under Sec 376 (rape charges) & 420 (cheating) of IPC registered against bodyguard of a famous Bollywood actress at DN Nagar PS in Andheri. He is yet to be arrested. Complainant alleged that he promised marriage to her & took Rs 50,000: DN Nagar Police (21.05)
— ANI (@ANI) May 22, 2021
ಆರೋಪಿ ಬಾಡಿಗಾರ್ಡ್ ಯುವತಿಗೆ ಕಳೆದ ವರ್ಷ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಈ ಭರವಸೆ ಮೇಲೆ ಬಾಡಿಗಾರ್ಡ್ ಲಿವ್-ಇನ್ ರಿಲೇಶನ್ಶಿಪ್ನಲ್ಲಿರೋಣಾ ಎಂದು ಯುವತಿಗೆ ಕೇಳಿದ್ದಾನೆ. ಮದುವೆಯಾಗುವ ಆಸೆಯಿಂದ ಯುವತಿ ಇದಕ್ಕೆ ಒಪ್ಪಿಗೆ ನೀಡಿದ್ದಳು ಎನ್ನಲಾಗ್ತಿದೆ.
ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಕಾರಣ ಆರೋಪಿ ಆಕೆಯೊಂದಿಗೆ ಶಾರರೀಕ ಸಂಬಂಧ ಬೆಳೆಸಲು ಯತ್ನಿಸಿದ್ದಾನೆ. ಇದಕ್ಕೆ ಯುವತಿ ವಿರೋಧಿಸಿದ್ದಾಳೆ. ಈ ವೇಳೆ ಬಲವಂತವಾಗಿ ಆಕೆಯೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಅಷ್ಟೇ ಅಲ್ಲ ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆಂದು ಸಂತ್ರಸ್ತೆಯಿಂದಲೇ 50 ಸಾವಿರ ರೂಪಾಯಿ ಹಣವನ್ನು ಪಡೆದಿದ್ದಾನೆ. ಬಳಿಕ ಮದುವೆಯಾಗುವುದಿಲ್ಲವೆಂದು ಯುವತಿಗೆ ಹೇಳಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಮುಂಬೈನ ಡಿಎನ್ ನಗರದಲ್ಲಿ ಆರೋಪಿ ವಿರುದ್ಧ ದೂರು ಸಲ್ಲಿಸಿದ್ದಾಳೆ.
ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಬಾಡಿಗಾರ್ಡ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ವಕ್ತಾರರಾದ ಡಿಸಿಪಿ ಚೈತನ್ಯ ದೃಢಪಡಿಸಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 377, ಮತ್ತು 420 ರ ಅಡಿಯಲ್ಲಿ ದಾಖಲಿಸಲಾಗಿದ್ದು, ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ.
ಓದಿ: 2011ರಿಂದ ನೀವು ಒಮ್ಮೆಯಾದ್ರೂ ಏರ್ ಇಂಡಿಯಾದಲ್ಲಿ ಓಡಾಡಿದ್ರೆ ಎಚ್ಚೆತ್ತುಕೊಳ್ಳಿ..