ETV Bharat / crime

ಮೈಸೂರು ಅತ್ಯಾಚಾರ ಸಂತ್ರಸ್ತೆಯ ಸ್ನೇಹಿತನ ಹೇಳಿಕೆ ಪಡೆದ ಪೊಲೀಸರು: ಆತ ಹೇಳಿದ್ದಿಷ್ಟು.. - ಮೈಸೂರು ಜಿಲ್ಲಾ ಸುದ್ದಿ

ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೂಳಿಸಿದ್ದು, ಇಂದು ಸಂತ್ರಸ್ತೆಯ ಸ್ನೇಹಿತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

rape case in Mysore; police recorded  victim's friend  statement
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಸಂತ್ರಸ್ತೆ ಸ್ನೇಹಿತನ ಹೇಳಿಕೆ ದಾಖಲಿಕೊಂಡ ಪೊಲೀಸರು
author img

By

Published : Aug 27, 2021, 11:20 AM IST

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸ್ನೇಹಿತನ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.

'ಆಗಸ್ಟ್ 24ರಂದು ನಾನು, ಗೆಳತಿ ತರಗತಿ ಮುಗಿಸಿಕೊಂಡು ಬೈಕ್‌ನಲ್ಲಿ ಸಂಜೆ 7.25 ರಿಂದ 7.30ರ ಸುಮಾರಿಗೆ ಜೆಎಸ್‌ಎಸ್ ಆಯುರ್ವೇದಿಕ್ ಕಾಲೇಜಿನ ಮುಂದೆ ವಾಟರ್ ಟ್ಯಾಂಕ್‌ ಬಳಿಯ ಕಚ್ಚಾ ರಸ್ತೆಯಲ್ಲಿ ಹೋದೆವು. ನಾನು ಯಾವಾಗಲೂ ವಾಯುವಿಹಾರಕ್ಕೆ ಹೋಗುವ ಸ್ಥಳ ಅದಾಗಿತ್ತು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿದಾಗ 25 ರಿಂದ‌ 30 ವರ್ಷದ ಸುಮಾರು 6 ಮಂದಿ ಬಂದರು. ಬಲ ಭಾಗದಿಂದ ಏಕಾಏಕಿ ಬಂದು ದೊಣ್ಣೆಯಿಂದ ಹಲ್ಲೆ ಮಾಡಿದರು.

ಇದನ್ನೂ ಓದಿ: Mysuru gang rape case: ಸಂತ್ರಸ್ತೆ ಯಾವುದೇ ಹೇಳಿಕೆ ನೀಡಿಲ್ಲ: ಆರಗ ಜ್ಞಾನೇಂದ್ರ

ದೊಣ್ಣೆಯಿಂದ ಹಲ್ಲೆ ಮಾಡಿದ ನಂತರ ನನ್ನನ್ನು ತಳ್ಳಿ ಜೊತೆಯಲ್ಲಿದ್ದ ನನ್ನ ಗೆಳತಿಯನ್ನು ಪೊದೆಗಳಿರುವ ಜಾಗಕ್ಕೆ ಎಳೆದುಕೊಂಡು ಹೋದರು. ಅದರಲ್ಲಿ ತೆಳ್ಳಗಿರುವ ಒಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆಗ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದು, 15 ನಿಮಿಷದ ನಂತರ ಪ್ರಜ್ಞೆ ಬಂತು. ಆ ಬಳಿಕ ನಾಲ್ವರು ನನ್ನ ಮುಂದೆ ನಿಂತು ನನ್ನ ತಂದೆಗೆ ಕರೆ ಮಾಡಿಸಿದರು. 3 ಲಕ್ಷ ಹಣ ಕೊಡುವಂತೆ ಪೀಡಿಸಿದರು. ಆ ಸಂದರ್ಭದಲ್ಲಿ ನಾನು ಗೆಳತಿ ಎಲ್ಲಿ? ಎಂದು ಕೇಳಿದೆ. ಆಗ ಇಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ತರಚಿದ ಗಾಯಗಳು ಆಕೆಯ ಮೈಮೇಲೆ ಕಂಡುಬಂದಿದ್ದವು' ಎಂದು ಸಂತ್ರಸ್ತೆಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.