ETV Bharat / crime

ಮಗಳ ಸಹವಾಸಕ್ಕೆ ಬರ್ಬೇಡ ಎಂದ ಯುವತಿ ತಂದೆಯನ್ನೇ ಕೊಂದ ಪಾಗಲ್ ಪ್ರೇಮಿ: ನೆಲಮಂಗಲದಲ್ಲಿ ಬರ್ಬರ ಕೊಲೆ - ನೆಲಮಂಗಲ ಕ್ರೈಮ್‌ ನ್ಯೂಸ್‌

ತಮ್ಮ ಪುತ್ರಿಯ ಸಹವಾಸಕ್ಕೆ ಬರಬೇಡ ಅಂತ ತಿಳಿಹೇಳಿದ ಯುವತಿ ತಂದೆಯನ್ನು ಪಾಗಲ್‌ ಪ್ರೇಮಿಯೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

pagal lover murder a woman's father in nelamangala
ಮಗಳ ಸಹವಾಸಕ್ಕೆ ಬರ್ಬೇಡ ಎಂದ ಯುವತಿ ತಂದೆಯನ್ನೇ ಹತ್ಯೆಗೈದ ಪಾಗಲ್ ಪ್ರೇಮಿ
author img

By

Published : Aug 24, 2021, 12:31 PM IST

Updated : Aug 24, 2021, 12:38 PM IST

ನೆಲಮಂಗಲ(ಬೆಂಗಳೂರು): ಮಗಳ ತಂಟೆಗೆ ಬರದಂತೆ ಬುದ್ಧಿವಾದ ಹೇಳಿದಕ್ಕೆ ನಡುರಸ್ತೆಯಲ್ಲೇ ಯುವತಿಯ ತಂದೆಯನ್ನು ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ನಾಗಪ್ಪ (49) ಕೊಲೆಯಾದವರು. ಇಂದು ಬೆಳಗ್ಗೆ ಖಾಸಗಿ ಕಂಪನಿಯ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಇಬ್ಬರು ಯುವಕರು ರಾಡ್ ನಿಂದ ನಾಗಪ್ಪ ಅವರನ್ನು ಹೊಡೆದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಆರೋಪಿ ನರೇಶ್ ಎಂಬ ಯುವಕ ಮೃತನ ಪುತ್ರಿಯನ್ನು ಲವ್ ಮಾಡುತ್ತಿದ್ದನಂತೆ. ಆದರೆ ಇದು ಒನ್ ಸೈಡ್ ಲವ್ ಆಗಿತ್ತು. ನಿನ್ನೆ ಪಾಗಲ್ ಪ್ರೇಮಿ ನರೇಶ್ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಾಗಪ್ಪ ಅವರ ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದು, ನರೇಶನಿಗೆ ಬುದ್ಧಿವಾದ ಹೇಳಿದ್ದರಂತೆ ನಾಗಪ್ಪ. ಇದರಿಂದ ಕೋಪಗೊಂಡಿದ್ದ ಆರೋಪಿ ಕೊಲೆ ಮಾಡಿರುವುದಾಗಿ ಮೃತ ನಾಗಪ್ಪನ ಸಂಬಂಧಿ ಸುರೇಶ್ ಆರೋಪಿಸಿದ್ದಾರೆ.

ನಾಗಪ್ಪ ತನ್ನ ಮಗನ ಜೊತೆ ಬಸ್ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಳ್ಳುವ ವೇಳೆ ಅಡ್ಡಗಟ್ಟಿದ ಯುವಕರು ಮಗನ ಮುಂದೆಯೇ ತಂದೆಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹಾಡಹಗಲೇ ಚಾಕುವಿನಿಂದ ಕತ್ತು ಸೀಳಿ ದಂಪತಿಯ ಬರ್ಬರ ಹತ್ಯೆ.. 4 ವಿಶೇಷ ತನಿಖಾ ತಂಡ ರಚನೆ

Last Updated : Aug 24, 2021, 12:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.