ಮೈಸೂರು: ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ವ್ಯಕ್ತಿಯ ವಿರುದ್ಧ ಯೂಥ್ ಕಾಂಗ್ರೆಸ್ ದೂರು ನೀಡಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು 2023ರ ಎಲೆಕ್ಷನ್ ನನ್ನ ಕೊನೆಯ ಚುನಾವಣೆ, ಮುಂದೆ ಯಾವುದೇ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಜಾಲತಾಣದಲ್ಲಿ ಹುಣಸೂರು ತಾಲೂಕಿನ ಕಲ್ಕೂಡಿಕೆ ಗ್ರಾಮದ ಗೋವಿಂದ ನಾಯಕ ಎಂಬುವವರು, 'ನೀನು ಎಲ್ಲೇ ನಿಂತರು ಸೋಲು, ನಿನ್ನಂತಹ ದುರಹಂಕಾರಿ ದೇಶದಲ್ಲೇ ಯಾರೂ ಇಲ್ಲಾ' ಎಂದು ಅವಹೇಳನಕಾರಿ ಹಾಗೂ ಅವಾಚ್ಯ ಶಬ್ದಗಳಿರುವ ಪೋಸ್ಟ್ ಅನ್ನು ಜಾಲತಾಣಗಳಲ್ಲಿ ಹಾಕಲಾಗಿದೆ ಎಂದು ದೂರು ದಾಖಲಿಸಲಾಗಿದೆ.

ಈ ಬಗ್ಗೆ ಯೂಥ್ ಕಾಂಗ್ರೆಸ್, ಈ ಪೋಸ್ಟ್ ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿದೆ. ಕೂಡಲೇ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದೆ.
ಇದನ್ನೂ ಓದಿ..2023ರ ಚುನಾವಣೆಯೇ ನನ್ನ ಕೊನೆಯ ಸ್ಪರ್ಧೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲ್ಲ : ಸಿದ್ದರಾಮಯ್ಯ