ಮುಂಗೇರ್(ಬಿಹಾರ) : ಅಪರಿಚಿತರ ಗುಂಪೊಂದು ಮನೆಯಲ್ಲಿ ಮಲಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷನ ಮೇಲೆ ಗುಂಡುಹಾರಿಸಿ ಕೊಲೆ ಮಾಡಿರುವ ಘಟನೆ ಬಿಹಾರದ ಮಥುರಾ ಎಂಬ ಗ್ರಾಮದಲ್ಲಿ ನಡೆದಿದೆ. ಪರಮಾನಂದ ತುಡ್ಡು ಎಂಬಾತ ಮೃತ ದುರ್ದೈವಿ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮನೆಗೆ ನುಗ್ಗಿದ ಅಪರಿಚಿತರ ಗ್ಯಾಂಗ್ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷ ಪರಮಾನಂದರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಮಾನಂದ ತುಡ್ಡು ಅವರು ತಮ್ಮ ಎದುರಾಳಿ ಯೋಗೇಂದರ್ ಕಾರ ಅವರನ್ನು ಸೋಲಿಸುವ ಚುನಾವಣೆಯಲ್ಲಿ ಗೆದ್ದಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಪರಮಾನಂದ ಅವರು ಚುನಾವಣೆಗೆ ಸ್ಪರ್ಧಿಸದಂತೆ ನಕ್ಸಲರು ಎಚ್ಚರಿಕೆ ನೀಡಿ ನಾಮಪತ್ರ ವಾಪಸ್ ಪಡೆಯುವಂತೆ ಕೇಳಿಕೊಳ್ಳಲಾಗಿತ್ತು.
ಹೀಗಾಗಿ, ಈತನನ್ನು ಶಂಕಿತ ನಕ್ಸಲರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಲಡೈಯಂತಂಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಕೊರೊನಾ 2ನೇ ಅಲೆ ವೇಳೆ ಗಂಗಾನದಿಯಲ್ಲಿ ತೇಲಿ ಬಂದಿದ್ದು ಬರೋಬ್ಬರಿ 300 ಹೆಣಗಳು!!