ಹಾವೇರಿ: ಸಮೀಪದ ಯತ್ತಿನಹಳ್ಳಿಯಲ್ಲಿ ಜೋಡಿ ಕೊಲೆ ನಡೆದಿದ್ದು, ಬಸ್ ನಿಲ್ದಾಣದ ಸಮೀಪದ ಎಪಿಎಂಸಿ ಕೊಠಡಿಯಲ್ಲಿ ಮಲಗಿದ್ದ ಇಬ್ಬರನ್ನು ಕೊಲೆ ಮಾಡಲಾಗಿದೆ.
ಓದಿ: ಬೆಳಗಾವಿ ಲೋಕಸಭೆ ಉಪ ಕದನ: ಕೈ-ಕಮಲದ ಅಭ್ಯರ್ಥಿಗಳಾರು?
ಮೃತರನ್ನ 28 ವರ್ಷದ ನಿಂಗಪ್ಪ ಶಿರಗುಪ್ಪಿ ಮತ್ತು 13 ವರ್ಷದ ಗಣೇಶ ಕುಂದಾಪುರ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಹಾವೇರಿ ಎಸ್ಪಿ ದೇವರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಆದಷ್ಟು ಬೇಗ ಆರೋಪಿಗಳನ್ನು ಸೆರೆ ಹಿಡಿಯುವುದಾಗಿ ದೇವರಾಜ್ ತಿಳಿಸಿದರು.
ಕೊಲೆಯಾಗಿದ್ದ ನಿಂಗಪ್ಪ ಮತ್ತು ಗಣೇಶ ಮಂಗಳವಾರ ಬೇರೆ ಕಡೆ ಊಟ ಮಾಡಿ ಇಲ್ಲಿ ಬಂದು ಮಲಗಿದ್ದಾರೆ. ಮುಂಜಾನೆ ಎಬ್ಬಿಸಲು ಹೋದರೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಇಬ್ಬರನ್ನು ದೇಹದಾರ್ಡ್ಯಕ್ಕೆ ಬಳಸುವ ಡಂಬಲ್ಸ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ನಿಂಗಪ್ಪ ಹಮಾಲಿ ಸೇರಿದಂತೆ ಇತರ ವ್ಯವಹಾರಗಳನ್ನು ಮಾಡುತ್ತಿದ್ದ. ಈತನ ಸ್ನೇಹಿತ ಶಂಬು ಮತ್ತು ರವಿ ಜೊತೆ ಸಣ್ಣಪುಟ್ಟ ಜಗಳವಾಗಿತ್ತು. ಆ ಜಗಳವೇನಾದರೂ ಈ ಕೊಲೆಗೆ ಕಾರಣವಾಗಿರಬಹುದು ಎಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಲೆ ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ಪಡೆ ಆಗಮಿಸಿ ತನಿಖೆ ಪರಿಶೀಲನೆ ನಡೆಸಲಾಯಿತು.