ETV Bharat / crime

ಹೆಂಡತಿಯರನ್ನು ಬದಲಾಯಿಸಿಕೊಳ್ಳುವ ಲೈಂಗಿಕ ಆಟ.. ಒಪ್ಪದ ಪತ್ನಿಗೆ ಪತಿಯಿಂದ ಚಿತ್ರಹಿಂಸೆ! - ಪತ್ನಿಗೆ ಪತಿಯಿಂದಲೇ ಚಿತ್ರಹಿಂಸೆ

ಗಾಯಗೊಂಡ ನಂತರ ಸಂತ್ರಸ್ತೆಯ ಆರೋಗ್ಯ ಹದಗೆಟ್ಟಿತ್ತು. ನಂತರ ಅವರನ್ನು ಸಂಬಂಧಿಕರು ಮಹಿಳೆಯ ತಾಯಿಯ ಮನೆಗೆ ಕರೆದೊಯ್ದರು. ಇದೆಲ್ಲದರ ನಂತರವಷ್ಟೇ ಆ ಮಹಿಳೆ ದೂರು ನೀಡಿದ್ದಾರೆ.

ವೈಫ್ ಸ್ವ್ಯಾಪಿಂಗ್ ಆಟಕ್ಕೆ ನಕಾರ: ಪತಿಯಿಂದಲೇ ಪತ್ನಿಯ ಮೇಲೆ ದೌರ್ಜನ್ಯ
MP: Woman assaulted over months for not playing 'wife-swap' game; Husband, in-laws booked
author img

By

Published : Oct 17, 2022, 4:35 PM IST

ಭೋಪಾಲ್ (ಮಧ್ಯ ಪ್ರದೇಶ): ವೈಫ್ ಸ್ವ್ಯಾಪಿಂಗ್ ಆಟದಲ್ಲಿ (ಹೆಂಡತಿಯರನ್ನು ಬದಲಾಯಿಸಿಕೊಳ್ಳುವ ಲೈಂಗಿಕ ಆಟ) ಪಾಲ್ಗೊಳ್ಳದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಪತಿಯಿಂದಲೇ ದೌರ್ಜನ್ಯಕ್ಕೊಳಗಾದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಹೋಟೆಲ್ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು, ಭೋಪಾಲ್‌ನಲ್ಲಿ ಪ್ರಕರಣ ದಾಖಲಾಗಿದೆ. ವರದಿಗಳ ಪ್ರಕಾರ, ದೂರುದಾರರ ಪತಿ ಬಿಕಾನೇರ್‌ನ 5-ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ.

ಪೊಲೀಸರಿಗೆ ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಪತಿ ತನ್ನನ್ನು ಬಿಕಾನೇರ್​ನ ಹೋಟೆಲ್ ಕೋಣೆಯಲ್ಲಿ ಲಾಕ್ ಮಾಡಿ ಫೋನ್ ಕಸಿದುಕೊಂಡರು. ಎರಡು ದಿನಗಳ ನಂತರ ಆತ ವಿಪರೀತ ಅಮಲೇರಿದ ಸ್ಥಿತಿಯಲ್ಲಿ ಕೋಣೆಗೆ ಬಂದ. ಮದ್ಯಪಾನ, ಡ್ರಗ್ಸ್ ಸೇವನೆ, ಬೇರೆ ಬೇರೆ ಹುಡುಗಿಯರ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು, ಹುಡುಗರ ಜೊತೆ ಸೆಕ್ಸ್​ ಮಾಡುವುದು ಇವೆಲ್ಲವೂ ಆತನಿಗೆ ದಿನನಿತ್ಯ ಜೀವನದ ಭಾಗವೇ ಆಗಿದ್ದವು. ಹೀಗಾಗಿ ಆತ ತನ್ನನ್ನು ವೈಫ್ ಸ್ವಾಪ್ ಆಟದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದ. ನಾನು ಆಟದ ಭಾಗವಾಗಲು ನಿರಾಕರಿಸಿದಾಗ, ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನನ್ನು ಅಸಂಸ್ಕೃತಳು ಎಂದು ಕರೆದು ನನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಎಂದು ಸಂತ್ರಸ್ತೆ ದೂರಿದ್ದಾರೆ. ಪತಿಯ ದೌರ್ಜನ್ಯದಿಂದ ತನಗೆ ವಿಪರೀತ ಗಾಯಗಳಾಗಿವೆ. ಅಷ್ಟಾದರೂ ವೈಫ್ ಸ್ವ್ಯಾಪಿಂಗ್ ಆಟದಲ್ಲಿ ಭಾಗವಾಗಲು ನಾನು ಒಪ್ಪಿಲ್ಲ ಎಂದು ನೊಂದ ಮಹಿಳೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ತನ್ನ ಪತಿಯೊಂದಿಗೆ ತನ್ನ ಅತ್ತೆ ಮತ್ತು ಅತ್ತಿಗೆ ಇಬ್ಬರೂ 50 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಾರೆ. ತನ್ನ ಗಂಡನ ಮನೆಯವರು ತನ್ನ ದೂರುಗಳಿಗೆ ಎಂದಿಗೂ ಗಮನ ಕೊಡಲಿಲ್ಲ ಮತ್ತು ನಾನು ಪುರಾತನ ಮನೋಭಾವದವಳೆಂದು ದೂಷಿಸುತ್ತಿದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿದ್ದಾರೆ.

ಗಾಯಗೊಂಡ ನಂತರ ಸಂತ್ರಸ್ತೆಯ ಆರೋಗ್ಯ ಹದಗೆಟ್ಟಿತ್ತು. ನಂತರ ಅವರ ಸಂಬಂಧಿಕರು ಮಹಿಳೆಯನ್ನು ಅವರ ತಾಯಿಯ ಮನೆಗೆ ಕರೆದೊಯ್ದರು. ಇದೆಲ್ಲದರ ನಂತರವಷ್ಟೇ ಮಹಿಳೆ ದೂರು ನೀಡಿದ್ದಾರೆ. ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 377, 498ಎ, 323, 506, 34, 3/4 ಅಡಿಯಲ್ಲಿ ಆಕೆಯ ಪತಿ ಮತ್ತು ಅತ್ತೆ ಮತ್ತು ಅತ್ತಿಗೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆ ಪ್ರಭಾರಿ ಅಂಜನಾ ಧುರ್ವೆ ತಿಳಿಸಿದ್ದಾರೆ.

ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಪರ ಪುರುಷನೊಂದಿಗೆ ಮಲಗುವಂತೆ ಒತ್ತಾಯ: ಪೊಲೀಸರ​ ಮೊರೆ ಹೋದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.