ETV Bharat / crime

ಚಾಕೋಲೇಟ್ ಆಸೆ ತೋರಿಸಿ ಹಸುಳೆ ಮೇಲೆ ಅತ್ಯಾಚಾರ ಮಾಡಿದ ಕಾಮುಕ!

author img

By

Published : Mar 24, 2021, 12:09 AM IST

ಕಾಮುಕನೋರ್ವ ಹಸುಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಪ್ರಕರಣ ದಾಖಲಾಗಿದೆ.

Minor raped in Bangalore
Minor raped in Bangalore

ಬೆಂಗಳೂರು: ಅಜ್ಜಿಯ ಮನೆಯಲ್ಲಿದ್ದ ಐದು ವರ್ಷದ ಪುಟ್ಟ ಕಂದನ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೃತ್ತಿಯಲ್ಲಿ ಟೆನಿಸ್ ಕೋಚ್ ಆಗಿರುವ ಆರೋಪಿಯಿಂದ ಈ ಕೃತ್ಯ ನಡೆದಿದೆ. ದಾಂಪತ್ಯ ಕಲಹದಿಂದ ಕೆಲವು ದಿನಗಳಿಂದ ಅಜ್ಜಿ ಮನೆಯಲ್ಲಿ ಮಗುವನ್ನ ಇರಿಸಲಾಗಿತ್ತು, ಹೀಗಾಗಿ ಮನೆಯಲ್ಲಿದ್ದ ಮಗುವಿನ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ.

ಇದನ್ನೂ ಓದಿ: ಸಿಡಿ ಪ್ರಕರಣ: ರಮೇಶ್​ ಜಾರಕಿಹೊಳಿ ವಿರುದ್ಧ ಇಡಿಗೆ ದೂರು ನೀಡಿದ ಕಾಂಗ್ರೆಸ್​​

ಆರೋಪಿ ಕೂಡ ಮಗು ವಾಸವಾಗಿದ್ದ ಬಿಲ್ಡಿಂಗ್‌ನಲ್ಲಿ ವಾಸವಾಗಿದ್ದನು ಎಂದು ತಿಳಿದು ಬಂದಿದೆ. ಮಗುವಿಗೆ ಚಾಕೊಲೇಟ್ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ. ಇನ್ನು 3-4 ದಿನಗಳ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ‌ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆತನ ಮೇಲೆ‌ ಸೂಕ್ತ ಕ್ರಮ‌ ಕೈಗೊಳ್ಳಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.