ETV Bharat / crime

ಲೋಕಾಯುಕ್ತರಿಗೇ ವಂಚನೆ: ನಕಲಿ ವಿಮಾನ ಟಿಕೆಟ್​ ನೀಡಿದ ಟ್ರಾವೆಲ್ ಏಜೆನ್ಸಿ!

author img

By

Published : Dec 16, 2022, 12:39 PM IST

ದೆಹಲಿಯ ಮಾಜಿ ಲೋಕಾಯುಕ್ತರು ದುಬೈಗೆ ತೆರಳಿದ್ದರು. ಅವರು ಅಲ್ಲಿಂದ ವಾಪಸ್ ಭಾರತಕ್ಕೆ ಮರಳಲು ಟ್ರಾವೆಲ್ ಏಜೆನ್ಸಿ ಒಂದರ ಬಳಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಆ ಟ್ರಾವೆಲ್ ಏಜೆನ್ಸಿಯವರು ನೀಡಿದ ಟಿಕೆಟ್ ನಕಲಿಯಾಗಿತ್ತು.

lokayukta-cheated-travel-agency-gave-fake-flight-ticket
ಲೋಕಾಯುಕ್ತರಿಗೇ ವಂಚನೆ: ನಕಲಿ ವಿಮಾನ ಟಿಕೆಟ್​ ನೀಡಿದ ಟ್ರಾವೆಲ್ ಏಜೆನ್ಸಿ!

ನವದೆಹಲಿ: ಲೋಕಾಯುಕ್ತರಿಗೇ ನಕಲಿ ವಿಮಾನ ಪ್ರಯಾಣದ ಟಿಕೆಟ್ ನೀಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಮಾಜಿ ಲೋಕಾಯುಕ್ತರಿಗೆ ಈ ರೀತಿ ವಂಚಿಸಲಾಗಿದೆ. ವಂಚನೆಗೊಳಗಾದ ಮಾಜಿ ಲೋಕಾಯುಕ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

ದೆಹಲಿಯ ಮಾಜಿ ಲೋಕಾಯುಕ್ತರು ದುಬೈಗೆ ತೆರಳಿದ್ದರು. ಅವರು ಅಲ್ಲಿಂದ ವಾಪಸ್ ಭಾರತಕ್ಕೆ ಮರಳಲು ಟ್ರಾವೆಲ್ ಏಜೆನ್ಸಿ ಒಂದರ ಬಳಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಆ ಟ್ರಾವೆಲ್ ಏಜೆನ್ಸಿಯವರು ನೀಡಿದ ಟಿಕೆಟ್ ನಕಲಿಯಾಗಿತ್ತು.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ನ್ಯಾಯಮೂರ್ತಿ (ನಿವೃತ್ತ) ಮನಮೋಹನ್ ಸರಿನ್ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ದೆಹಲಿ ಹೈಕೋರ್ಟ್‌ನಲ್ಲಿಯೂ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದಾರೆ. ಅವರು ಜುಲೈ 4ರಂದು ಪತ್ನಿಯೊಂದಿಗೆ ದುಬೈಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಹೋಗಿ ಬರಲು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದರು. ಹೊರಡುವಾಗ ಟ್ರಾವೆಲ್ ಏಜೆನ್ಸಿಯವರು ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನೀಡಿದ್ದರು. ಆದರೆ ರಿಟರ್ನ್ ಟಿಕೆಟ್ ನಕಲಿಯಾಗಿತ್ತು. ವಾಪಸಾಗುವಾಗ ಟಿಕೆಟ್ ಮುದ್ರಣಕ್ಕೆ ತಲುಪಿದಾಗ ಟಿಕೆಟ್ ಇರಲಿಲ್ಲ. ಇದಾದ ಬಳಿಕ ದೆಹಲಿ ಹೈಕೋರ್ಟಿನ ಪ್ರೋಟೋಕಾಲ್ ವಿಭಾಗವನ್ನು ಸಂಪರ್ಕಿಸಿದಾಗ ಅವರು ಟಿಕೆಟ್ ಪಡೆಯಲು ಬಯಸಿದ್ದ ಪಿಎನ್‌ಆರ್ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಅದರ ನಂತರ ಅವರು ಮತ್ತೆ ಟ್ರಾವೆಲ್ ಏಜೆಂಟ್ ಅನ್ನು ಸಂಪರ್ಕಿಸಿದ್ದಾರೆ. ಬ್ಯುಸಿನೆಸ್ ಕ್ಲಾಸ್‌ನಲ್ಲಿ ಸೀಟು ಸಿಗದೇ ಇರುವುದರಿಂದಲೇ ಹೀಗೆ ಆಗುತ್ತಿದೆ ಎಂದು ಹೇಳಿದ ಟ್ರಾವೆಲ್ಸ್​ನವರು, ಆಗಲೇ ಹಣ ಪಾವತಿಸಿದ್ದರೂ ತರಾತುರಿಯಲ್ಲಿ ಎಕಾನಮಿ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ. ಲೋಕಾಯುಕ್ತರು ಜುಲೈ 4ರಂದು ದುಬೈಗೆ ಹೋಗಿದ್ದರು ಮತ್ತು ಜುಲೈ 10ರಂದು ಹಿಂತಿರುಗುವವರಿದ್ದರು.

ಸದ್ಯ ತಮಗೆ ವಂಚನೆಯಾಗಿರುವ ಬಗ್ಗೆ ಲೋಕಾಯುಕ್ತರು ದೆಹಲಿ ಪೊಲೀಸರಿಗೆ ಎಲ್ಲ ದಾಖಲೆಗಳನ್ನು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮಾರಾಟವಾಗ್ತಿವೆ ನಕಲಿ ಟಿಕೆಟ್​​.. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಬರುವ ಮುನ್ನ ಎಚ್ಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.