ಭುವನೇಶ್ವರ್(ಒಡಿಶಾ): ಪಾಲಿಸಿದಾರರು ಮೃತ ಪಟ್ಟಿದ್ದಾರೆಂದು ನಕಲಿ ದಾಖಲೆಗಳನ್ನು ಸಲ್ಲಿಸಿ 1.81 ಕೋಟಿ ರೂಪಾಯಿ ಹಣ ವಂಚಿಸಿದ್ದ ಎಲ್‌ಐಸಿ ಏಜೆಂಟ್‌ನನ್ನು ಆರ್ಥಿಕ ಅಪರಾಧ ದಳ (ಇಒಡಬ್ಲ್ಯೂ) ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಪುರಿ ಜಿಲ್ಲೆಗೆ ಸೇರಿದ ಕಬೀರಾಜ್ ಬೆರ್ಹಾ ಬಂಧಿತ ಎಲ್‌ಐಸಿ ಏಜೆಂಟ್ ಆಗಿದ್ದಾನೆ. ಖುರ್ದಾ ಬ್ರಾಂಚ್ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದ ಆರ್ಥಿಕ ಅಪರಾಧ ದಳ ಆರೋಪಿಯ ಮನೆಯಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ನಂತರ ಬೆರ್ಹಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಡಿಕೆ ತ್ರಿಪಾಠಿ ತಿಳಿಸಿದ್ದಾರೆ.
ಪಾಲಿಸಿದಾರರು ಮೃತಪಟ್ಟಿರುವ ಬಗ್ಗೆ ನಾಮಿನಿಗಳ ಬ್ರೇನ್‌ವಾಷ್ ಮಾಡಿ ನಕಲಿ ದಾಖಲೆಗಳನ್ನು ಸಂಸ್ಥೆಗೆ ಸಲ್ಲಿಸಿ 1.18 ಕೋಟಿ ರೂಪಾಯಿಗಳನ್ನು ವಂಚಿಸಿರುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ದೂರು ನೀಡಿದ್ದರು ಎಂದು ಹೇಳಿದ್ದಾರೆ.
2013 ರಿಂದ 2019ರ ಅವಧಿಯಲ್ಲಿ ವಿಮಾದಾರರು ಮೃತಪಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 23 ಪಾಲಿಸಿಗಳಿಂದ ಹಣ ಪಡೆದಿದ್ದಾರೆ. ಈತ 2003 ರಿಂದ ಎಲ್‌ಐಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಕಲಿ ಮರಣ ಪ್ರಮಾಣ ಪತ್ರಗಳನ್ನು ನೀಡಿ ಹಣ ಪಡೆಯುವುದಕ್ಕೂ ಮುನ್ನ ಬಂಧಿತ ಆರೋಪಿ ಪೇ ಪ್ರಿಮಿಯಂ ಪಾಲಿಸಿಗಳನ್ನು ಪಡೆದಿದ್ದು, ತಾನೇ ಕಂತಿನ ಹಣವನ್ನು ಪಾವತಿ ಮಾಡುತ್ತಿದ್ದ. ಬಳಿಕ ಪಾಲಿಸಿದಾರ ಮೃತಪಟ್ಟಿರುವುದಾಗಿ ದಾಖಲೆಗಳನ್ನು ಸಲ್ಲಿಸಿ ಖುರ್ದಾ ಬ್ರಾಂಚ್‌ನಲ್ಲಿ ಪಾಲಿಸಿ ಹಣ ಪಡೆಯುತ್ತಿದ್ದಾನೆ. ಹೀಗೆ 23 ಪಾಲಿಸಿಗಳಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಆರ್ಥಿಕ ಅಪರಾಧ ದಳ ಹೇಳಿಕೆ ಬಿಡುಗಡೆ ಮಾಡಿದೆ.