ETV Bharat / crime

ಯುವತಿಯನ್ನು ಕೊಂದು ನೀರಿಗೆಸೆದು, ಸುಟ್ಟು ಮತ್ತೆ ಹೂಳಿದ ದುರುಳರು: ಲಿವ್ ಇನ್ ದುರಂತ!

ಮೃತ ಯುವತಿಯನ್ನು ಲುಧಿಯಾನದ ಹಾತೂರ್ ಪ್ರದೇಶದ 24 ವರ್ಷದ ಜಸ್ಪಿಂದರ್ ಕೌರ್ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಪರಮಪ್ರೀತ್ ಸಿಂಗ್ (21), ಆತನ ಸಹೋದರ ಭಾವಪ್ರೀತ್ ಸಿಂಗ್, ಆತನ ಸ್ನೇಹಿತ ಏಕಮ್ಜೋತ್ ಮತ್ತು ಇನ್ನೊಬ್ಬ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಜಮೀನಿನಲ್ಲಿದ್ದ ಶವವನ್ನೂ ಹೊರತೆಗೆದಿದ್ದಾರೆ.

ಯುವತಿಯನ್ನು ಕೊಂದು ನೀರಿಗೆಸೆದು, ಸುಟ್ಟು ಮತ್ತೆ ಹೂಳಿದ ದುರುಳರು: ಮತ್ತೊಂದು ಲಿವ್ ಇನ್ ದುರಂತ
kill-young-woman-throw-her-in-water-burn-her-and-bury-her-again-another-live-in-tragedy
author img

By

Published : Dec 7, 2022, 6:24 PM IST

ಲುಧಿಯಾನ: ಪ್ರಿಯಕರನನ್ನು ಮದುವೆಯಾಗಲು ಮನೆ ಬಿಟ್ಟು ಹೊರಹೋದ 24 ವರ್ಷದ ಯುವತಿಯೊಬ್ಬಳು 12 ದಿನಗಳ ನಂತರ ಸಮಾಧಿಯಾಗಿ ಪತ್ತೆಯಾದ ಘಟನೆ ಪಂಜಾಬಿನ ಜಗರಾಂವ್​ನಲ್ಲಿ ಘಟಿಸಿದೆ. ಯುವತಿಯನ್ನು ಕೊಲೆಗೈದು ಶವವನ್ನು ಕುದುರೆ ಫಾರ್ಮ್​ನಲ್ಲಿ ಹೂತ ಆರೋಪದ ಮೇಲೆ ಯುವತಿಯ ಲವರ್ ಮತ್ತು ಆತನ ಮೂವರು ಸಹಚರರನ್ನು ಲುಧಿಯಾನ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಮೊದಲು ಮೃತ ದೇಹವನ್ನು ಸುಧಾರ್ ಕಾಲುವೆಯಲ್ಲಿ ಎಸೆದಿದ್ದಾರೆ. ಆದರೆ ನೀರಿನ ಹರಿವು ಕಡಿಮೆಯಾದ ಕಾರಣ ಅವರು ಮರುದಿನ ದೇಹವನ್ನು ಅಲ್ಲಿಂದ ಎತ್ತಿ ನಂತರ ಅದನ್ನು ಸುಡಲು ಪ್ರಯತ್ನಿಸಿದ್ದಾರೆ. ಆದರೆ ಅದೂ ವಿಫಲವಾದಾಗ ಅರೆಬರೆ ಸುಟ್ಟ ಶವವನ್ನು ಪ್ರಮುಖ ಆರೋಪಿಯ ಒಡೆತನದ ಕುದುರೆ ಫಾರಂನಲ್ಲಿ (ಸ್ಟಡ್ ಫಾರಂನಲ್ಲಿ) ಹೂತು ಹಾಕಿದ್ದಾರೆ.

ಮೃತ ಯುವತಿ ಜಸ್ಪಿಂದರ್ ಕೌರ್
ಮೃತ ಯುವತಿ ಜಸ್ಪಿಂದರ್ ಕೌರ್

ಮೃತ ಯುವತಿಯನ್ನು ಲುಧಿಯಾನದ ಹಾತೂರ್ ಪ್ರದೇಶದ 24 ವರ್ಷದ ಜಸ್ಪಿಂದರ್ ಕೌರ್ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಪರಮಪ್ರೀತ್ ಸಿಂಗ್ (21), ಆತನ ಸಹೋದರ ಭಾವಪ್ರೀತ್ ಸಿಂಗ್, ಆತನ ಸ್ನೇಹಿತ ಏಕಮ್ಜೋತ್ ಮತ್ತು ಇನ್ನೊಬ್ಬ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಜಮೀನಿನಲ್ಲಿದ್ದ ಶವವನ್ನೂ ಹೊರತೆಗೆದಿದ್ದಾರೆ.

ನವೆಂಬರ್ 24 ರಂದು ಯುವತಿ ಸ್ವಲ್ಪ ನಗದು ಮತ್ತು ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದಳು. ಮಗಳು ಕಾಣೆಯಾಗಿರುವ ಬಗ್ಗೆ ಹಾತೂರು ಪೊಲೀಸರನ್ನು ಸಂಪರ್ಕಿಸಿದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಕಳೆದ ಕೆಲ ಸಮಯದಿಂದ ಲಿವ್ ಇನ್ ರಿಲೇಶನ್​ಶಿಪ್​ ನಲ್ಲಿದ್ದ ಜಸ್ಪಿಂದರ್ ಮತ್ತು ಪರಮಪ್ರೀತ್ ಸಂಬಂಧಿಕರೂ ಆಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗರಾನ್ ಹರ್ಜೀತ್ ಸಿಂಗ್ ಹೇಳಿದ್ದಾರೆ.

ಜಸ್ಪಿಂದರ್ ಪರಮಪ್ರೀತ್​ನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಜಸ್ಪಿಂದರ್​ಗೆ ಬೇರೆಯವರೊಂದಿಗೆ ಸಂಬಂಧವಿದೆ ಎಂಬ ಶಂಕೆ ಹೊಂದಿದ್ದ ಪರಮಪ್ರೀತ್​ಗೆ ಮದುವೆ ಇಷ್ಟವಿರಲಿಲ್ಲ. ಆದರೆ ಜಸ್ಪಿಂದರ್ ಮನೆ ಬಿಟ್ಟು ಪರಮಪ್ರೀತ್ ಬಳಿ ಹೋಗಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಆತ ಒಪ್ಪಿಲ್ಲ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಕೊನೆಗೆ ಪರಮಪ್ರೀತ್ ಆಕೆಯ ಕೊರಳಿಗೆ ದುಪಟ್ಟಾ ಬಿಗಿದು ಕೊಲೆ ಮಾಡಿದ್ದಾನೆ.

ನಂತರ ಪರಮಪ್ರೀತ್ ತನ್ನ ಸಹೋದರ ಮತ್ತು ಇಬ್ಬರು ಸ್ನೇಹಿತರ ಸಹಾಯದಿಂದ ಸುಧಾರ್ ಕಾಲುವೆಯಲ್ಲಿ ಶವ ಎಸೆದಿದ್ದಾನೆ. ಆದರೆ ಕಡಿಮೆ ನೀರಿನ ಹರಿವಿನಿಂದ ದೇಹ ಮುಂದೆ ಹರಿಯದೆ ಅಲ್ಲೇ ಉಳಿದಿದೆ. ನಂತರ ಅವರು ದೇಹವನ್ನು ಹೊರತೆಗೆದು ಸ್ಟಡ್ ಫಾರ್ಮ್ ಬಳಿ ಸುಡಲು ಪ್ರಯತ್ನಿಸಿದ್ದಾರೆ. ಆದಾಗ್ಯೂ ಶವ ಸರಿಯಾಗಿ ಸುಟ್ಟಿಲ್ಲ. ಆಗ ಆರೋಪಿಗಳು ಕುದುರೆ ಸಾವನ್ನಪ್ಪಿದ್ದು ಅದನ್ನು ಹೂಳಲು ಗುಂಡಿ ತೋಡಬೇಕಿದೆ ಎಂದು ಜೆಸಿಬಿ ಯಂತ್ರವನ್ನು ಬಾಡಿಗೆ ಪಡೆದು ಜಸ್ಪಿಂದರ್‌ಳನ್ನು ಗುಂಡಿಯಲ್ಲಿ ಹೂತು ಹಾಕಿದ್ದಾರೆ.

ಇದನ್ನೂ ಓದಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ: ಕಲ್ಲಿನಿಂದ ಜಜ್ಜಿ ಕೊಲೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.