ಚೆನ್ನೈ: ತಮಿಳುನಾಡಿನ ಕೋಯಮತ್ತೂರಿನಲ್ಲಿರುವ ಸುವಾರ್ತಾಬೋಧಕನ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು 4.7 ಕೆಜಿ ಚಿನ್ನದ ಬಾರ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತೆರಿಗೆ ವಂಚನೆ ಆರೋಪದ ಮೇಲೆ ಸುವಾರ್ತಾಬೋಧಕ ಪೌಲ್ ದಿನಕರನ್ ಅವರ ನಿವಾಸ, ಚೆನ್ನೈನಲ್ಲಿರುವ 'ಜೀಸಸ್ ಕಾಲ್ಸ್' ಮಿಷನರಿ, ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ಅವರಿಗೆ ಸೇರಿದ 28 ಸ್ಥಳಗಳ ಮೇಲೆ ಜನವರಿ 20 ರಂದು ಐಟಿ ದಾಳಿ ನಡೆಸಿತ್ತು. ದಾಳಿ ವೇಳೆ 4.7 ಕೆಜಿ ಚಿನ್ನದ ಬಾರ್ಗಳು ಹಾಗೂ ದೇಣಿಗೆ, ವಿದೇಶಿ ಹೂಡಿಕೆ ಸಂಬಂಧ ಕೆಲ ದಾಖಲೆಗಳು ಸಿಕ್ಕಿವೆ ಎನ್ನಲಾಗ್ತಿದ್ದು, 118 ಕೋಟಿ ರೂ.ಗಳ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಏಕ್ ದಿನ್ ಕಾ ಸಿಎಂ... ಇಂದು ಉತ್ತರಾಖಂಡದ ಮುಖ್ಯಮಂತ್ರಿ ಆಗಲಿದ್ದಾಳೆ ಸೃಷ್ಟಿ ಗೋಸ್ವಾಮಿ!
ಪೌಲ್ ದಿನಕರನ್, ಜೀಸಸ್ ಕಾಲ್ಸ್ ಮಿಷನರಿಯ ಸಂಸ್ಥಾಪಕ ಜಿಎಸ್ ದಿನಕರನ್ ಅವರ ಪುತ್ರರಾಗಿದ್ದು, ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕುಲಪತಿಯಾಗಿದ್ದಾರೆ.