ETV Bharat / crime

ಕೌಟುಂಬಿಕ ಕಲಹ: ಪತ್ನಿ, ಮತ್ತವರ ಇಬ್ಬರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ - ದೆಹಲಿಯಲ್ಲಿ ಪತ್ನಿ ಮತ್ತವರ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ ವ್ಯಕ್ತಿ

ಮಾತುಕತೆಗಾಗಿ ಮಹಿಳೆ ತನ್ನ ಇಬ್ಬರು ಸಹೋದರರನ್ನು ಆಹ್ವಾನಿಸಿದ್ದರು. ಈ ವೇಳೆ, ನಡೆದ ಜಗಳದಲ್ಲಿ ವ್ಯಕ್ತಿ ಈ ಮೂವರನ್ನು ಹತ್ಯೆ ಮಾಡಿದ್ದಾನೆ. ದೆಹಲಿಯ ಶಕುರ್‌ಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

husband killed wife brother in law and her wife  in delhi
ಕೌಟುಂಬಿಕ ಕಲಹ: ಪತ್ನಿ, ಮತ್ತವರ ಇಬ್ಬರ ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿ
author img

By

Published : Mar 7, 2022, 12:20 PM IST

Updated : Mar 7, 2022, 1:48 PM IST

ನವದೆಹಲಿ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊರ್ವ ತನ್ನ ಪತ್ನಿ, ಮತ್ತವರ ಇಬ್ಬರು ಸಹೋದರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿಯ ಶಕುರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಮಹಿಳೆ ತನ್ನ ಸಹೋದರರನ್ನು ನಿವಾಸಕ್ಕೆ ಆಹ್ವಾನಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಳು. ಕೆಲ ಕಾರಣಗಳಂದ ವ್ಯಕ್ತಿ ಮೂವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾಳೆ.

ಆರೋಪಿಯು ಪರವಾನಗಿ ಪಡೆದ ರಿವಾಲ್ವರ್‌ ಅನ್ನು ಅಪರಾಧ ಕೃತ್ಯಕ್ಕೆ ಬಳಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮನೆಗೆ‌ ನುಗ್ಗಿ ಮೊಬೈಲ್​, ಲ್ಯಾಪ್​ ಟಾಪ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

Last Updated : Mar 7, 2022, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.