ಹುಬ್ಬಳ್ಳಿ: ನೋಡೋಕೆ ಸುಂದರಾಂಗಿ. ಜೊತೆಗಿತ್ತು ಕಂಠಸಿರಿ. ಇದಿಷ್ಟೇ ಆಗಿದ್ದಿದ್ದರೆ ಈ ಪರಿಸ್ಥಿತಿ ಆಕೆಗೆ ಬರುತ್ತಿರಲಿಲ್ಲ. ಆದ್ರೆ ಪುರುಷರನ್ನು ಆಕರ್ಷಣೆಯಿಂದ ಸೆಳೆದು ತನ್ನ ಖೆಡ್ಡಾಕ್ಕೆ ಕೆಡವಿ ರಾತ್ರಿ ಬೆಳಗಾಗುವುದರೊಳಗೆ ರೊಕ್ಕ ಸಂಪಾದನೆಗೆ ಇಳಿದುಬಿಟ್ಟಳು. ಅಂದಹಾಗೆ ಈ ಯುವತಿಯ ಹೆಸರು ಅನಘ ವಡವಿ. ಈಕೆ ಧಾರವಾಡದ ಹಾಡುಗಾರ್ತಿ.
ಈಕೆಯ ಪಾಡಿಗೆ ಸಿಂಗಿಂಗ್ ಮಾಡಿಕೊಂಡಿದ್ದಿದ್ದರೆ ಇವತ್ತು ಒಂದಿಷ್ಡು ಅಭಿಮಾನಿಗಳು ಆಕೆಗೆ ಇರುತ್ತಿದ್ದರು. ಜನ ಚಪ್ಪಾಳೆ ಸಿಳ್ಳೆ ಹೊಡೆದು ಹುರಿದುಂಬಿಸುತ್ತಿದ್ದರೇನೋ. ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡಲು ಹೋಗಿದ್ದ ಈಕೆ ಅದೇ ಕಾಲೇಜಿನ ಉಪನ್ಯಾಸಕನಿಗೆ ಬಲೆ ಬೀಸಿದ್ದಾಳೆ. ಯುವತಿಯ ಕಂಠಸಿರಿಗೆ ಮರುಳಾದ ಉಪನ್ಯಾಸಕ ಆಕೆಯ ಬಣ್ಣದ ಮಾತಿಗೆ ಬೆರಗಾಗಿಬಿಟ್ಟ. ತುಂಬಾ ಕ್ಲೋಸ್ ಆಗಿ ಮಾತನಾಡೋಕೆ ಶುರುವಿಟ್ಟುಕೊಂಡ. ಮೊದಲೇ ಹಣದಾಸೆಗೆ ಬಿದ್ದಿದ್ದ ಯುವತಿ ಉಪನ್ಯಾಸಕನಿಂದ ಹಲವು ಬಾರಿ ಹಣ ಕಿತ್ತುಕೊಂಡಿದ್ದಳು. ಅದ್ಯಾವಾಗ ತಾನು ಆತ ಕೇಳಿದಾಗಲೆಲ್ಲ ಹಣ ಕೊಡಲು ಶುರು ಮಾಡಿದ್ನೋ ಆಗಲೇ ನೋಡಿ ಆಕೆಯ ಅಸಲಿ ಗೇಮ್ ಶುರುವಾಗಿತ್ತು.
ಸ್ನೇಹಿತರ ಜೊತೆ ಸ್ಕೆಚ್ ಹಾಕಿ ಲೆಕ್ಚರರ್‌ಗೆ ಹಳ್ಳ ತೋಡಲು ಮುಂದಾದಳು. ಪರಿಣಾಮ, ಹನಿಟ್ರ್ಯಾಪ್ ಮಾಡಲು ಹೋಗಿ ಈಗ ಜೈಲು ಸೇರಿದ್ದಾಳೆ. 2017ರಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಹುಬ್ಬಳ್ಳಿಯ 5ನೇ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿ ಅನಘ ವಡವಿಗೆ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಿದೆ.
ಮೂವರು ಯುವಕರ ಜೊತೆ ಸೇರಿಕೊಂಡು ಅಂದು ಪ್ಲ್ಯಾನ್ ಮಾಡಿದ ಅನಘ ವಡವಿ, ಉಪನ್ಯಾಸಕರೊಬ್ಬರನ್ನು ಕಾರವಾರ ರಸ್ತೆಗೆ ಕರೆದುಕೊಂಡು ಹೋಗಿದ್ದಳು. ಸ್ವಲ್ಪ ಹೊತ್ತು ಕ್ಲೋಸ್ ಆಗಿ ಮೂವ್ ಮಾಡಿದ್ದಾಳೆ. ಬಳಿಕ ಆಕೆಯ ಹುಡುಗರು ಸ್ಥಳಕ್ಕೆ ಬರುತ್ತಿದ್ದಂತೆ ನವರಂಗಿ ಆಟ ಶುರು ಮಾಡಿದ್ದಾಳೆ. ಜೊತೆಗೆ ಉಪನ್ಯಾಸಕನ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾಳೆ. ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾಳೆ. ಆದ್ರೆ ಇದ್ಯಾವುದಕ್ಕೂ ಒಪ್ಪದಿದ್ದಾಗ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿ ಹಣದೋಚಿಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: ವಿವಾಹೇತರ ಸಂಬಂಧ ಶಂಕೆ: ವಿಜಯಪುರದಲ್ಲಿ ಯುವಕನ ಕೊಂದು ಬೆಂಕಿ ಇಟ್ಟ ಕಿರಾತಕರು
ಈ ಬಗ್ಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದಿತು ಅಂತಾರಲ್ಲ ಹಾಗೆ, ಹನಿಟ್ರ್ಯಾಪ್ ಪ್ರಕರಣದ ವಿಚಾರಣೆ ನಡೆಸಿದ ಐದನೇ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಾದ ಅನಘ ವಡವಿ, ಗಣೇಶ್ ಶೆಟ್ಟಿ, ರಮೇಶ್ ಹಜಾರೆ, ವಿನಾಯಕ ಹಜಾರೆಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿ ಆದೇಶಿಸಿತು.