ನವದೆಹಲಿ: ಕಳೆದ ಕೆಲ ತಿಂಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ದಾಖಲೆ ಮಟ್ಟದ ಹೆರಾಯಿನ್ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗ್ತಿದ್ದಾರೆ. ಇದೀಗ ದೆಹಲಿ ವಿಶೇಷ ಪೊಲೀಸ್ ಇಲಾಖೆ ದಾಖಲೆಯ 2,500 ಕೋಟಿ ರೂ. ಮೌಲ್ಯದ 350 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಡಿಸಿಪಿ ಪ್ರಮೋದ್ ನೇತೃತ್ವದ ತಂಡ, 350 ಕೆ.ಜಿ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಭಾಗಿಯಾಗಿದ್ದ ನಾಲ್ವರ ಬಂಧನ ಮಾಡಿದೆ. ಬಂಧಿತರಲ್ಲಿ ಮೂವರು ಹರಿಯಾಣ ಹಾಗೂ ಓರ್ವ ದೆಹಲಿ ಮೂಲದವನು ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರೆದಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.
-
Delhi Police Special Cell arrests four persons for possession of more than 350kg heroin worth over Rs 2,500 crores pic.twitter.com/n85UQ0Fr8Q
— ANI (@ANI) July 10, 2021 " class="align-text-top noRightClick twitterSection" data="
">Delhi Police Special Cell arrests four persons for possession of more than 350kg heroin worth over Rs 2,500 crores pic.twitter.com/n85UQ0Fr8Q
— ANI (@ANI) July 10, 2021Delhi Police Special Cell arrests four persons for possession of more than 350kg heroin worth over Rs 2,500 crores pic.twitter.com/n85UQ0Fr8Q
— ANI (@ANI) July 10, 2021
ಇದನ್ನೂ ಓದಿರಿ: 2,000 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡ DRI
ಇದಕ್ಕೂ ಮೊದಲು ಕಳೆದ ಜೂನ್ 28ರಂದು ದೆಹಲಿ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು 126 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಮುಂಬೈ ಡಿಆರ್ಐ ಅಧಿಕಾರಿಗಳು ಸಮುದ್ರದ ಮೂಲಕ ಇರಾನ್ನಿಂದ ಬರುತ್ತಿದ್ದ 283 ಕೆಜಿ ಅಕ್ರಮ ಹೆರಾಯಿನ್ ಸೀಜ್ ಮಾಡಿದ್ದು, ಇದರ ಒಟ್ಟು ಮೌಲ್ಯ 2,000 ಕೋಟಿ ರೂ. ಎಂದು ತಿಳಿದು ಬಂದಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದರು.