ಕರ್ನೂಲ್, ಆಂಧ್ರ ಪ್ರದೇಶ: ಕೂಲ್ ಡ್ರಿಂಕ್ಸ್ನಲ್ಲಿ ಸೈನೈಡ್ ಸೇರಿಸಿ ಕುಡಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರ್ನೂಲು ಜಿಲ್ಲೆಯ ನಂದ್ಯಾಲ ಬಳಿಯ ಮಲ್ದಾರ್ಪೇಟ್ ಕಾಲೋನಿಯಲ್ಲಿ ನಡೆದಿದೆ.
ಚಂದ್ರಶೇಖರ್, ಕಲಾವತಿ ದಂಪತಿ ಮತ್ತು ಅವರ ಮಕ್ಕಳಾದ ಅಂಜಲಿ, ಅಖಿಲಾ ಸಾವನ್ನಪ್ಪಿದವರಾಗಿದ್ದು, ಹಣಕಾಸು ತೊಂದರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಉಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕ
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ನಂತರವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ.