ETV Bharat / crime

ಮಹಿಳೆ ಸ್ನಾನ ಮಾಡುವುದನ್ನ ಕದ್ದು ವಿಡಿಯೋ ರೆಕಾರ್ಡ್​​... ದೂರು ದಾಖಲು - Mangaluru Latest news

ಕದ್ದು ಮುಚ್ಚಿ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

bathing women
bathing women
author img

By

Published : Jul 17, 2021, 11:44 PM IST

ಮಂಗಳೂರು: ಮಹಿಳೆಯೊರ್ವರು ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್​ನಲ್ಲಿ ಕದ್ದುಮುಚ್ಚಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ಸಂಜೆ 7.30ರ ವೇಳೆಗೆ ಮಹಿಳೆ ತನ್ನ ಮನೆಯ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯ ಹೊರಭಾಗದಿಂದ ಮೊಬೈಲ್​ನಲ್ಲಿ ಬಾತ್ ರೂಂನೊಳಗಿನ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಕೂಡಲೇ ಅಲ್ಲಿಂದ ಹೊರ ಬಂದು ತಾಯಿಗೆ ವಿಷಯ ತಿಳಿಸಿದ್ದಾರೆ. ಮಹಿಳೆ ಮತ್ತು ತಾಯಿ ಇಬ್ಬರು ಮನೆಯ ಹಿಂದೆ ಬಂದು ನೋಡಿದಾಗ ಮನೆಯ ಪಕ್ಕದಲ್ಲಿದ್ದ ಬೆಂಚನ್ನು ಬಾತ್ ರೂಂ ಕಿಟಕಿ ಸಮೀಪ ಇರಿಸಿ ಅದರ ಮೇಲೆ ಓರ್ವ ನಿಂತಿದ್ದು ಕಂಡು ಬಂದಿದೆ. ಇವರಿಬ್ಬರೂ ಅಲ್ಲಿಗೆ ಬರುವುದನ್ನು ನೋಡಿ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿರಿ: 'ಹಲ್ಲೆ ಮಾಡಿಲ್ಲ ಅಂತ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ' : 'ದರ್ಶನ್​​'ಗೆ 'ಇಂದ್ರಜಿತ್'​​ ಸವಾಲು

ಈ ಬಗ್ಗೆ ಮಹಿಳೆ ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ‌ ದೂರು ದಾಖಲು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.