ETV Bharat / crime

ಚಿಕ್ಕಬಳ್ಳಾಪುರ ಡಿಸಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ, ಹಣಕ್ಕೆ ಬೇಡಿಕೆ - ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಪ್ರೊಫೈಲ್‌ ಫೋಟೊ ಬಳಸಿರುವ ಖದೀಮರು ಮತ್ತೊಂದು ಖಾತೆ ಸೃಷ್ಟಿಸಿದ್ದಾರೆ. ಅವರೊಂದಿಗೆ ಇರುವ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ.

chikkaballapur-dc
ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌
author img

By

Published : Mar 14, 2021, 6:04 PM IST

ಚಿಕ್ಕಬಳ್ಳಾಪುರ: ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು 15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

chikkaballapur-dc
ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌

ಇದನ್ನೂ ಓದಿ: ಸಿಡಿ ತನಿಖೆ ಚುರುಕು: ಯುವತಿಯ ಮೂಲ ಪತ್ತೆಗೆ ಪೊಲೀಸರ ಶೋಧ

ಆನ್‌ಲೈನ್‌ ಖದೀಮರು ಪರಿಚಿತರಿಗೆ ಮೆಸೆಂಜರ್‌ ಮೂಲಕ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಪ್ರೊಫೈಲ್‌ ಫೋಟೊ ಬಳಸಿದ್ದು, ಮತ್ತೊಂದು ಖಾತೆ ಸೃಷ್ಟಿಸಿದ್ದಾರೆ. ಅವರೊಂದಿಗೆ ಇರುವ ಸ್ನೇಹಿತರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಫ್ರೆಂಡ್‌ ಆಗಿದ್ದಾರೆ. ನಂತರ ಅನುಮಾನ ಬಾರದಂತೆ ಎಫ್‌ಬಿ ಮೆಸೆಂಜರ್‌ ಮೂಲಕ ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಆರ್. ಲತಾ, ಡಿಸಿ ಚಿಕ್ಕಬಳ್ಳಾಪುರ (DC Chikkaballpur) ಎಂಬ ಹೆಸರಿನಿಂದ ನಕಲಿ ಫೇಸ್‌ಬುಕ್‌ ಖಾತೆಯನ್ನು ತೆರೆಯಲಾಗಿದ್ದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಸದರಿ ಹೆಸರಿನಿಂದ ಬರುವ ಫ್ರೆಂಡ್ ರಿಕ್ವೆಸ್ಟ್‌ಗೆ ಸಮ್ಮತಿ ನೀಡಬಾರದು ಹಾಗೂ ಹಣ ವರ್ಗಾವಣೆ ಮಾಡದಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.