ETV Bharat / crime

ಅಪ್ರಾಪ್ತೆಯ ಖಾಸಗಿ ಫೋಟೋ ಶೇರ್‌ ಮಾಡ್ತಿದ್ದ ಐಐಟಿ ವಿದ್ಯಾರ್ಥಿ ಅರೆಸ್ಟ್

ಅಪ್ರಾಪ್ತೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿದ್ದ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ವಿದ್ಯಾರ್ಥಿಯನ್ನು ದೆಹಲಿ ಸೈಬರ್‌ ಸೆಲ್‌ ಪೊಲೀಸರು ಬಂಧಿಸಿದ್ದಾರೆ.

delhi police arrested IIT student from Bihar uploading obscene photos of minor girls on social sites
ಅಪ್ರಪ್ತೆಯ ಖಾಸಗಿ ಫೋಟೋ ಶೇರ್‌ ಮಾಡ್ತಿದ್ದ ಐಐಟಿ ವಿದ್ಯಾರ್ಥಿ ಬಂಧನ
author img

By

Published : Oct 7, 2021, 1:25 PM IST

ನವದೆಹಲಿ: ಅಪ್ರಾಪ್ತೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿದ್ದ ಗಂಭೀರ ಆರೋಪದಲ್ಲಿ ಐಐಟಿ ವಿದ್ಯಾರ್ಥಿಯೋರ್ವನನ್ನು ದೆಹಲಿ ಸೈಬರ್‌ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಫೋನ್‌ ಹಾಗೂ ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ.

19 ವರ್ಷದ ಮಹಾವೀರ್‌ ಬಂಧಿತ. ಈತ ದೆಹಲಿಯ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಹಾರದ ನಿವಾಸಿ. ಆರೋಪಿ ಬಾಲಕಿಯನ್ನು ಪುಸಲಾಯಿಸಿ ಆಕೆಯಿಂದ ಖಾಸಗಿ ಫೋಟೋಗಳನ್ನು ಕಳುಹಿಸಿಕೊಂಡು ನಂತರ ಆನ್‌ಲೈನ್‌ ತರಗತಿಗಳಿಗೆ ಮಾಡಿದ ವೆಬ್‌ಸೈಟ್‌ನಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಶಾಲೆಯ ಸುಮಾರು 50ಕ್ಕೂ ಹೆಚ್ಚು ಅಪ್ರಾಪ್ತೆಯರು ಹಾಗೂ ಶಿಕ್ಷಕರಿಗೂ ಈತ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಅಶ್ಲೀಲ ಫೋಟೋಗಳನ್ನು ಅಪ್‌ಲೋಡ್‌ ಮಾಡಲೆಂದೇ ಆರೋಪಿ ಇನ್ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದಿದ್ದು ತನಿಖೆಯಲ್ಲಿ ಗೊತ್ತಾಗಿದೆ.

ಈ ಪ್ರಕರಣ ಸಂಬಂಧ ಬಾಲಕಿಯ ಪೋಷಕರು ಹಾಗೂ ಶಿಕ್ಷಕರು ದೆಹಲಿಯ ಸಿವಿಲ್‌ ಲೈನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣವನ್ನು ಸೈಬರ್‌ ಸೆಲ್‌ಗೆ ರವಾನಿಸಿದ್ದರು. ಸೈಬರ್‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ 3 ವರ್ಷಗಳಿಂದ ಆರೋಪಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.