ETV Bharat / crime

ಅನಿಲ್‌ ದೇಶ್‌ಮುಖ್‌ಗೆ ಕ್ಲೀನ್ ಚಿಟ್ ಕುರಿತ ಪಿಇ ಮಾಹಿತಿ ಸೋರಿಕೆ ಆರೋಪ; ಸಿಬಿಐ ತನಿಖೆಗೆ ದೆಹಲಿ ಕೋರ್ಟ್‌ ಆದೇಶ

ಅವ್ಯವಹಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರಿಗೆ ಕ್ಲೀನ್ ಚಿಟ್ ಕುರಿತ ಪ್ರಾಥಮಿಕ ತನಿಖೆಯ (ಪಿಇ) ಸೋರಿಕೆ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಕೋರ್ಟ್‌ ಸಿಬಿಐ ತನಿಖೆಗೆ ಆದೇಶ ನೀಡಿದೆ.

Court directs CBI to probe former Maharashtra minister Anil Deshmukh's role in PE leak case
ಅನಿಲ್‌ ದೇಶ್‌ಮುಖ್‌ಗೆ ಕ್ಲೀನ್ ಚಿಟ್ ಕುರಿತ ಪಿಇ ಮಾಹಿತಿ ಸೋರಿಕೆ ಆರೋಪ; ಸಿಬಿಐ ತನಿಖೆಗೆ ದೆಹಲಿ ಕೋರ್ಟ್‌ ಆದೇಶ
author img

By

Published : Dec 23, 2021, 1:06 PM IST

ನವದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ಗೆ ಸದ್ಯಕ್ಕೆ ರಿಲೀಫ್‌ ಸಿಗುವಂತೆ ಕಾಣುತ್ತಿಲ್ಲ. ಅನಿಲ್ ದೇಶ್‌ಮುಖ್‌ಗೆ ಕ್ಲೀನ್ ಚಿಟ್ ನೀಡಿದ ಆರೋಪ ಕುರಿತು ಸಂಸ್ಥೆಯ ಪ್ರಾಥಮಿಕ ತನಿಖೆಯ (ಪಿಇ) ಸೋರಿಕೆಯಲ್ಲಿ ದೇಶ್‌ಮುಖ್‌ ಪಾತ್ರದ ಕುರಿತು ತನಿಖೆ ನಡೆಸುವಂತೆ ದೆಹಲಿ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ.

ಸಿಬಿಐನ ಚಾರ್ಜ್ ಶೀಟ್‌ನಲ್ಲಿ ದೇಶ್‌ಮುಖ್ ಅವರನ್ನು ಆರೋಪಿಯನ್ನಾಗಿ ಮಾಡದಿದ್ದರೂ, ಪ್ರಾಥಮಿಕ ತನಿಖೆಯ ಮಾಹಿತಿ ಸೋರಿಕೆಯ ಲಾಭ ಪಡೆದು ದೊಡ್ಡ ಪಿತೂರಿಗೆ ಮನಸ್ಸು ಮಾಡಿರಬಹುದು ಎಂದು ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಹೇಳಿದ್ದಾರೆ.

ಸಿಬಿಐನ ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ತಿವಾರಿ, ದೇಶಮುಖ್ ಪರ ವಕೀಲ ಆನಂದ್ ದಾಗಾ ಹಾಗೂ ದೇಶ್‌ಮುಖ್‌ ಅವರ ಸಾಮಾಜಿಕ ಮಾಧ್ಯಮ ನಿರ್ವಹಣೆಗಾರ ವೈಭವ್ ಗಜೇಂದ್ರ ತುಮಾನೆ ವಿರುದ್ಧ ಬಾಂಬೆ ಹೈಕೋರ್ಟ್ ಪ್ರಾಥಮಿಕ ತನಿಖೆಗೆ ನಿರ್ದೇಶಿಸಿದೆ. ಅಲ್ಲದೆ, ಮಾಜಿ ಸಚಿವರ ವಿರುದ್ಧ ಆರೋಪದ ಮೇಲೆ ಸಲ್ಲಿಸಲಾದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯ ನಿನ್ನೆ ನಡೆದ ವಿಚಾರಣೆಯಲ್ಲಿ ಗಮನಿಸಿದೆ.

ಆರೋಪಿಗಳಾದ ದಾಗಾ, ತುಮಾನೆ ಅನಿಲ್ ದೇಶ್‌ಮುಖ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂದು ತೋರುತ್ತದೆ. ಅವರು ದೊಡ್ಡ ಪಿತೂರಿಯ ಮನಸ್ಸು ಹೊಂದಿರಬಹುದು. ಆದರೆ ಆರೋಪಿಗಳು ಕೇವಲ ಕೈಗಳಾಗಿರಬಹುದು, ಪಿಇ ಮತ್ತು ಆರ್‌ಸಿ (ಪ್ರಕರಣ) ವಿಷಯಗಳ ಸೋರಿಕೆಯಿಂದ ಮಾಜಿ ಸಚಿವ ದೇಶ್‌ಮುಖ್‌ ಮೇಲಿನ ಮುಖ್ಯ ಫಲಾನುಭವಿಯಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ಕೃಷಿ ತ್ಯಾಜ್ಯ ಸುಟ್ಟ ಆರೋಪ: ಮೂರು ವರ್ಷದಲ್ಲಿ ಹರಿಯಾಣದಲ್ಲಿ 2,943 ರೈತರ ಮೇಲೆ ಪ್ರಕರಣ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.