ಮೇದಕ್(ತೆಲಂಗಾಣ): ನಿರುದ್ಯೋಗ ಸಮಸ್ಯೆಯಿಂದಾಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮೇದಕ್ನಲ್ಲಿ ನಡೆದಿದೆ. ಕಿಶೋರ್ ಹಾಗೂ ಕವಿತಾ ಸಾವನ್ನಪ್ಪಿರುವ ದಂಪತಿ. ಇವರ ಇಬ್ಬರು ಮಕ್ಕಳು ಇದೀಗ ಅನಾಥವಾಗಿವೆ.
ಕಳೆದ ಐದು ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಹೈದರಾಬಾದ್ಗೆ ಕಿಶೋರ್ ಹಾಗೂ ಕವಿತಾ ಆಗಮಿಸಿದ್ದರು. ಚಿಲಕಲಗುಡ್ಡದಲ್ಲಿ ಹೇರ್ ಕಟಿಂಗ್ ಸಲೂನ್ ಬಾಡಿಗೆ ಪಡೆದು ಕೆಲಸ ಮಾಡುತ್ತಿದ್ದರು. ಉದ್ಯೋಗ ಚೆನ್ನಾಗಿ ನಡೆಯುತ್ತಿದ್ದ ಕಾರಣ ಕೆಲ ವರ್ಷಗಳ ಕಾಲ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ ವರ್ಷ ಕೊರೊನಾ ಸೋಂಕಿನಿಂದಾಗಿ ತೊಂದರೆ ಶುರುವಾಗುತ್ತದೆ. ಲಾಕ್ಡೌನ್ ಘೋಷಣೆ ಮಾಡ್ತಿದ್ದಂತೆ ಕಟಿಂಗ್ ಶಾಪ್ ಬಂದ್ ಮಾಡಬೇಕಾಯಿತು. ಹೀಗಾಗಿ ಬೇರೆ ದಾರಿ ಕಾಣದೇ ತಮ್ಮಿಬ್ಬರು ಮಕ್ಕಳೊಂದಿಗೆ ಊರಿಗೆ ವಾಪಸ್ ಆಗಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ಹೈದರಾಬಾದ್ಗೆ ವಾಪಸ್ ಆಗಿರುವ ದಂಪತಿ, ತಮ್ಮಿಬ್ಬರು ಮಕ್ಕಳನ್ನ ಅಜ್ಜನ ಊರಿಗೆ ಮರಳಿ ಕಳುಹಿಸಿದ್ದಾರೆ. ಇದಾದ ಬಳಿಕ ತಾವಿಬ್ಬರು ವಿಷ ಸೇವನೆ ಮಾಡಿದ್ದಾರೆ. ಈ ವೇಳೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಇವರ ಇಬ್ಬರು ಮಕ್ಕಳು ಅನಾಥವಾಗಿವೆ.
ಇದನ್ನೂ ಓದಿರಿ: ಸ್ವೀಡನ್ನಲ್ಲಿ ಸ್ಕೈ ಡೈವಿಂಗ್ ವಿಮಾನ ಪತನ: 9 ಮಂದಿ ಸ್ಥಳದಲ್ಲೇ ಸಾವು