ETV Bharat / crime

ಆರು ಮಂದಿ ಶಂಕಿತ ಉಗ್ರರ ಬಂಧಿಸಿದ ಬಿಹಾರ ಭಯೋತ್ಪಾದನಾ ನಿಗ್ರಹ ದಳ

ಬಿಹಾರದಲ್ಲಿ ಖಾಸಗಿ ಹೋಟೆಲ್ ಮೇಲೆ ಭಯೋತ್ಪಾದನಾ ನಿಗ್ರಹ ದಳ ದಾಳಿ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

bihar-ats-arrested-6-suspects-in-gaya
ಭಯೋತ್ಪಾದನಾ ನಿಗ್ರಹ ದಳದಿಂದ ಆರು ಮಂದಿ ಬಂಧನ
author img

By

Published : Feb 2, 2021, 9:59 AM IST

ಪಾಟ್ನಾ(ಬಿಹಾರ): ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗಯಾ ಬಳಿಯ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದ ಆರು ಮಂದಿ ಶಂಕಿತ ಉಗ್ರರನ್ನು ಬಂಧಿಸಿ, ಅವರಿಂದ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದೆ.

ಶಂಕಿತರು ಕಳೆದ 10 ದಿನಗಳಿಂದ ಕೊತ್ವಾಲಿ ಠಾಣಾ ವ್ಯಾಪ್ತಿಯ ಗುರುದ್ವಾರ ರಸ್ತೆಯಲ್ಲಿ ಬರುವ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದರು. ಈ ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ಪಡೆದಿದ್ದು, ಉತ್ತರ ಪ್ರದೇಶ, ಗುಜರಾತ್ ಮತ್ತು ಬಿಹಾರ ಮೂಲದವರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಮಾಜಿ ಸಿಎಂ ಸಂಬಂಧಿ ಸಿದ್ದಾರ್ಥ ಕೊಲೆ ಕೇಸ್‌: ಪೊಲೀಸರಿಗೆ ಹೆದರಿ ಆರೋಪಿ ಆತ್ಮಹತ್ಯೆ

ಸೋಮವಾರ ಬೆಲಗಂಜ್ ಪ್ರದೇಶದಿಂದ ಓರ್ವ ಶಂಕಿತನನ್ನು ಭಯೋತ್ಪಾದನಾ ನಿಗ್ರಹ ದಳ ವಶಕ್ಕೆ ಪಡೆದುಕೊಂಡಿದೆ. ಈತ ನೀಡಿದ ಮಾಹಿತಿ ಆಧರಿಸಿ, ತಡರಾತ್ರಿ ಐವರನ್ನು ಬಂಧಿಸಲಾಗಿದೆ.

ಇದಕ್ಕೂ ಮೊದಲು ಗಯಾ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಿದ ಎಟಿಎಸ್,​ ವಿದೇಶಿ ನಕಲಿ ಕರೆನ್ಸಿ ಜಾಲವನ್ನು ಪತ್ತೆ ಪತ್ತೆಹಚ್ಚಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.