ETV Bharat / crime

ಪೊಲೀಸ್ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿ ಹಲ್ಲೆ ಮಾಡಿದ್ದ ರೌಡಿಶೀಟರ್ ಬಂಧನ - ಪೊಲೀಸ್ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿ ಹಲ್ಲೆ

ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚುವ ಜತೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿಜಯ್ ಅಲಿಯಾಸ್ ಗೊಣ್ಣೆ ವಿಜಿ ಎಂಬ ರೌಡಿಶೀಟರ್ ನನ್ನು ಬೆಂಗಳೂರು ನಗರದ ಚೆನ್ನಮ್ಮನಕೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Rowdy sheeter vijaya arrested
ಪೊಲೀಸ್ ಸಿಬ್ಬಂದಿಗೆ ಹಲ್ಲೆಗೈದಿದ್ದ ರೌಡಿಶೀಟರ್ ವಿಜಯ
author img

By

Published : Nov 3, 2022, 4:07 PM IST

ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚುವ ಜತೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿಜಯ್ ಅಲಿಯಾಸ್ ಗೊಣ್ಣೆ ವಿಜಿ ಎಂಬುವನನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನಲ್ಲಿ ಅಡಗಿದ್ದ ಆರೋಪಿ: ಹಿಂದಿನ ತಿಂಗಳು 28 ರಂದು ಹೊಸಕೆರೆಹಳ್ಳಿ ಬಸ್ ನಿಲ್ದಾಣದ ಬಳಿ ನಂಬರ್ ಪ್ಲೇಟ್ ರಹಿತ ಸ್ಕೂಟರ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ, ಆರೋಪಿಯನ್ನು ಗಿರಿನಗರ ಠಾಣಾ ಹೊಯ್ಸಳ ಪೊಲೀಸರು ತಡೆದು ವಿಚಾರಿಸಿದ್ದರು. ಅವಾಗಲೇ ಈತನು ಪೊಲೀಸ್​ ಸಿಬ್ಬಂದಿ ನಾಗೇಂದ್ರ, ಕಿರಣ್ ಹಾಗೂ ನೇತ್ರಾ ಎಂಬುವರ ಮೇಲೆ ಪೆಪ್ಪರ್ ಸ್ಪ್ರೇ ಎರಚಿ, ಹಲ್ಲೆ ಮಾಡಿ ಪರಾರಿಯಾಗಿದ್ದನು. ಈತನ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು ಪ್ರಸ್ತುತ ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ಆರೋಪಿ ಗೊಣ್ಣೆ ವಿಜಿಯನ್ನ ಬಂಧಿಸಿದ್ದಾರೆ.

ತನಿಖೆ: ಆರೋಪಿಯ ವಿರುದ್ಧ ಕೊಲೆ, ದರೋಡೆ, ಸುಲಿಗೆಯಂಥ ಪ್ರಕರಣಗಳಿದ್ದು, ಇತ್ತೀಚೆಗೆ ರಾಮನಗರ ಭಾಗದಲ್ಲಿ ದರೋಡೆ ಪ್ರಕರಣವೊಂದರಲ್ಲೂ ವಿಜಿ ಪೊಲೀಸರಿಗೆ ಬೇಕಾಗಿದ್ದನು ಎಂದು ತಿಳಿದು ಬಂದಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ:ಎಟಿಎಂ ಕಳ್ಳತನ ವಿಫಲ ಯತ್ನ: ಜಾಲ ಭೇದಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.