ಕಡಬ(ದಕ್ಷಿಣ ಕನ್ನಡ) : ಪ್ರಕರಣವೊಂದರಲ್ಲಿ ಕೇರಳದ ತಿರುವನಂತಪುರಂನಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಕೇರಳ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಕಡಬಕ್ಕೆ ಬಂದು ಬಂಧಿಸಿಕೊಂಡು ಹೋದ ಘಟನೆ ನಡೆದಿದೆ.
ಈತನ ವಿರುದ್ಧ ಕೇರಳದಲ್ಲಿ ಮಚ್ಚಿನಿಂದ ಕಡಿದ ಪ್ರಕರಣಕ್ಕೆ ಸಂಬಂಧಿದಂತೆ ದೂರು ದಾಖಲಾಗಿತ್ತು. ಆರೋಪಿ ಕೇರಳದಿಂದ ತಪ್ಪಿಸಿಕೊಂಡು ಬಂದು ನೀರಾಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತ ಇಲ್ಲಿನ ರೂಮ್ ಒಂದರಲ್ಲಿ ವಾಸವಿದ್ದ. ಇದು ಅಲ್ಲಿನ ಪೊಲೀಸರಿಗೆ ಪ್ರಕರಣದ ತನಿಖೆಗೆ ತೊಂದರೆಯಾಗಿತ್ತು. ಸೂಕ್ತ ಮಾಹಿತಿಯೊಂದಿಗೆ ಕಡಬಕ್ಕೆ ಕೇರಳದ ತಿರುವಂತಪುರಂ ಜಿಲ್ಲೆಯ ವೆಂಜಾರಂಮೂಡ್ ನಿಂದ ಬಂದ ಸಿಪಿಐ ಅನೂಪ್ ಸತ್ಯನ್ ಹಾಗೂ ಇಬ್ಬರು ಪೊಲೀಸರ ತಂಡ ಬಿನು ಎಂಬಾತನನ್ನು ಬಂಧಿಸಿದ್ದಾರೆ. ಇದೀಗ ಆರೋಪಿಯನ್ನು ಪತ್ತೆ ಹಚ್ಚಿರುವ ಕೇರಳ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಪೊಲೀಸ್ ಅಧಿಕಾರಿ ಅನೂಪ್ ಸತ್ಯನ್ ತಿಳಿಸಿದ್ದಾರೆ.
ಆರೋಪಿ ಬಿನು ಕಳೆದ ಕೆಲವು ತಿಂಗಳುಗಳಿಂದ ಚರ್ಚ್ ಒಂದಕ್ಕೆ ಸಂಬಂಧಿಸಿದ ರಬ್ಬರ್ ತೋಟ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿವೆ. ಹೊರ ರಾಜ್ಯಗಳಿಂದ ಕೆಲಸ ಹುಡುಕಿಕೊಂಡು ಜಿಲ್ಲೆಯ ವಿವಿಧ ಭಾಗಗಳಿಗೆ ಬರುವವರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಬಾಣಸವಾಡಿ: ವಿದೇಶಿ ಪ್ರಜೆಗೆ ಚಾಕು ತೋರಿಸಿ ಕಾರು ದೋಚಿದ ಆರೋಪಿ ಸೆರೆ