ETV Bharat / crime

'ಗುಂಡು' ಮಕ್ಕಳಿಗೆ ಬೇಸರದ ಸುದ್ದಿ: ಮದ್ಯ ಬಾಟಲಿಗಳ ಸಾಲಾಗಿ ನಿಲ್ಲಿಸಿ ನಾಶಗೈದ ಪೊಲೀಸರು - ಆಂಧ್ರಪ್ರದೇಶದ ಕೃಷ್ಣ ಜಿಲ್ಲಾ ಪೊಲೀಸರು

ದಾಳಿ ವೇಳೆ ಜಪ್ತಿ ಮಾಡಿದ 5,900 ಮದ್ಯದ ಬಾಟಲಿಗಳಲ್ಲಿ ಅವಧಿ ಮೀರಿದ, ಸೋರಿಕೆಯಾಗುತ್ತಿದ್ದ ಅನೇಕ ಬಾಟಲಿಗಳನ್ನು ಆಂಧ್ರಪ್ರದೇಶದ ಕೃಷ್ಣ ಜಿಲ್ಲಾ ಪೊಲೀಸರು ನಾಶಪಡಿಸಿದ್ದಾರೆ.

Andhra Pradesh police destroys illegal liquor bottles seized during raids
ಸಾವಿರಾರು ಮದ್ಯದ ಬಾಟಲಿಗಳನ್ನು ನಾಶ ಮಾಡಿದ ಆಂಧ್ರ ಪೊಲೀಸ್​
author img

By

Published : May 25, 2021, 6:45 AM IST

ಕೃಷ್ಣ (ಆಂಧ್ರಪ್ರದೇಶ): ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಆಂಧ್ರಪ್ರದೇಶದ ಕೃಷ್ಣ ಜಿಲ್ಲಾ ಪೊಲೀಸರು ಅವುಗಳನ್ನು ನಾಶಪಡಿಸಿದ್ದಾರೆ.

ಕೃಷ್ಣ ಜಿಲ್ಲೆಯ 33 ಪೊಲೀಸ್ ಠಾಣೆಗಳಲ್ಲಿ ದಾಖಲಾದ 800 ಪ್ರಕರಣಗಳ ಬೆನ್ನತ್ತಿದ ಪೊಲೀಸರು, ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ್ ಬಾಬು ಅವರ ನೇತೃತ್ವದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 5,900 ಮದ್ಯದ ಬಾಟಲಿಗಳು ದೊರೆತಿವೆ.

ಇದನ್ನೂ ಓದಿ: ಮನೆಯಲ್ಲಿಯೇ ಅಕ್ರಮ ಮದ್ಯ ಮಾರಾಟ: 50 ಸಾವಿರ ಮೌಲ್ಯದ ಮದ್ಯ ವಶ

ಇವುಗಳಲ್ಲಿ ಅನೇಕ ಬಾಟಲಿಗಳು ಅವಧಿ ಮೀರಿದ್ದಾಗಿದೆ ಹಾಗೂ ಸೋರಿಕೆಯಾಗುತ್ತಿದ್ದ ಬಾಟಲಿಗಳಾಗಿವೆ. ಹೀಗಾಗಿ ಇಂತಹ ಬಾಟಲಿಗಳನ್ನು ನಾಶ ಮಾಡಲಾಗಿದೆ. ರಾಜ್ಯದ ಗಡಿಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಮದ್ಯ ಉತ್ಪಾದನೆ ಮತ್ತು ಸಾಗಣೆ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.