ETV Bharat / crime

ದೆಹಲಿಯಿಂದ ವಲಸೆ ಕಾರ್ಮಿಕರನ್ನು ಹೊತ್ತು ಬರುತ್ತಿದ್ದ ಬಸ್​ ಪಲ್ಟಿ: ಮೂವರು ಸಾವು

ದೆಹಲಿಯಿಂದ ಮಧ್ಯಪ್ರದೇಶದ ತೆರಳುತ್ತಿದ್ದ ಬಸ್​ ಪಲ್ಟಿಯಾಗಿ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

gwalior
ದೆಹಲಿಯಿಂದ ವಲಸೆ ಕಾರ್ಮಿಕರನ್ನು ಹೊತ್ತು ಬರುತ್ತಿದ್ದ ಬಸ್​ ಪಲ್ಟಿ
author img

By

Published : Apr 20, 2021, 1:53 PM IST

ಗ್ವಾಲಿಯರ್​ (ಮಧ್ಯಪ್ರದೇಶ): ದೆಹಲಿಯಲ್ಲಿ ಲಾಕ್​ಡೌನ್​​ ಘೋಷಣೆಯಾದ ಹಿನ್ನೆಲೆಯಲ್ಲಿ ಅಲ್ಲಿದ್ದ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳಲು ಹತ್ತಿದ್ದ ಬಸ್​ ಅಪಘಾತಕ್ಕೀಡಾಗಿದೆ.

ದೆಹಲಿಯಿಂದ ವಲಸೆ ಕಾರ್ಮಿಕರನ್ನು ಹೊತ್ತು ಬರುತ್ತಿದ್ದ ಬಸ್​ ಪಲ್ಟಿ

ದೆಹಲಿಯಿಂದ ಮಧ್ಯಪ್ರದೇಶದ ಚತ್ತರ್​ಪುರ್​ ಹಾಗೂ ಟಿಕಾಮ್​ಗಢ್​ಗೆ ಹೋಗುತ್ತಿದ್ದ ಬಸ್​​ ಗ್ವಾಲಿಯರ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಪರಿಣಾಮ, ಸ್ಥಳದಲ್ಲೇ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: 'ನಮಗೆ ಯಾರೂ ಸಹಾಯ ಮಾಡಲ್ಲ': ದೆಹಲಿ ತೊರೆಯುತ್ತಿರುವ ವಲಸೆ ಕಾರ್ಮಿಕರ ವೇದನೆ

ಚಾಲಕ ಮದ್ಯ ಸೇವಿಸಿ ಬಸ್ ಓಡಿಸುತ್ತಿದ್ದ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಸ್​ನೊಳಗೆ ಸಿಲುಕಿದವರನ್ನು ರಕ್ಷಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗೆ ಜನರನ್ನು ತುಂಬಿಸಿದ್ದರಿಂದಲೇ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.