ETV Bharat / city

ಪಾವಗಡ ಅಪಘಾತ : ಬಸ್​ನ ಮೇಲಿದ್ದರು 40ಕ್ಕೂ ಹೆಚ್ಚು ಮಂದಿ! - ಪಾವಗಡ ರಸ್ತೆ ಅಪಘಾತ

ಪಳವಳ್ಳಿಕಟ್ಟೆ ಬಳಿ ಬಸ್ ತೆರಳುವ ವೇಳೆಗೆ ಚಾಲಕ ಮದ್ಯದ ನಶೆಯಲ್ಲಿದ್ದನು ಎಂದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ. ಅಲುಗಾಟದ ವೇಳೆ ಚಾಲಕ ಬಸ್​ನಿಂದ ಕೆಳಗೆ ಧುಮುಕಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ತನಿಖೆ ನಡೆಯುತ್ತಿದೆ..

Tumakuru pavagada accident updates
ಪಾವಗಡ ಅಪಘಾತ: ಬಸ್​ನ ಮೇಲಿದ್ದರು 40ಕ್ಕೂ ಹೆಚ್ಚು ಮಂದಿ
author img

By

Published : Mar 20, 2022, 2:58 PM IST

ತುಮಕೂರು : ಪಾವಗಡ ಸಮೀಪ ಪಳವಳ್ಳಿಕಟ್ಟೆ ಬಳಿ ನಡೆದ ದುರಂತಕ್ಕೂ ಮೊದಲು ಖಾಸಗಿ ಬಸ್​ನಲ್ಲಿ ಹೆಚ್ಚಿನ ಜನರಿದ್ದು, ಬಸ್​ನ ಮೇಲ್ಭಾಗದಲ್ಲಿ 40ಕ್ಕೂ ಹೆಚ್ಚು ಮಂದಿ ಕುಳಿತಿರೋದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಮತ್ತು ಪಾವಗಡ ನಡುವಿನ ಬುಡ್ಡಾರೆಡ್ಡಿಹಳ್ಳಿ ಟೋಲ್ ಬರುವ ವೇಳೆಗೆ ಬಸ್ ಟಾಪ್ ಮೇಲೆ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂತಿದ್ದಾರೆ. ಅಲ್ಲದೇ ಬಸ್​​ನ ಚಾಲಕ ಟೋಲ್ ಸಿಬ್ಬಂದಿಯ ಮೇಲೆ ರೇಗಾಡಿ, ಮುಂದೆ ಸಾಗಿದ್ದಾನೆ.

ಅಪಘಾತಕ್ಕೂ ಮೊದಲು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ..

ಪಳವಳ್ಳಿಕಟ್ಟೆ ಬಳಿ ಬಸ್ ತೆರಳುವ ವೇಳೆಗೆ ಚಾಲಕ ಮದ್ಯದ ನಶೆಯಲ್ಲಿದ್ದನು ಎಂದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ. ಅಲುಗಾಟದ ವೇಳೆ ಚಾಲಕ ಬಸ್​ನಿಂದ ಕೆಳಗೆ ಧುಮುಕಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.