ETV Bharat / city

ತುಮಕೂರಿನಲ್ಲಿ ಭೀಕರ ಅಪಘಾತ: ನವ ವರ ಸೇರಿ ಮೂವರು ಸ್ಥಳದಲ್ಲೇ ಸಾವು! - lorry Inova car accident

ಚಿಕ್ಕ ಶೆಟ್ಟಿಕೆರೆ ಬಳಿ ಲಾರಿ ಹಾಗೂ ಇನೋವಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ನವ ವರ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

accident in Tumakuru
ತುಮಕೂರಿನಲ್ಲಿ ಭೀಕರ ಅಪಘಾತ
author img

By

Published : Apr 29, 2022, 9:39 AM IST

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಚಿಕ್ಕ ಶೆಟ್ಟಿಕೆರೆ ಬಳಿ ಲಾರಿ ಹಾಗೂ ಇನೋವಾ ಕಾರಿನ ನಡುವೆ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ನವ ವರ ಹಾಗೂ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರುತಿಸಲಾಗಿದೆ.

ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್​ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ಮದುವೆಯಾಗಿತ್ತು. ಮನೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಕಮಲಾಪುರಕ್ಕೆ ಕಾರಿನಲ್ಲಿ ಆಗಮಿಸಿದ್ದರು. ನಸುಕಿನ ಜಾವ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂಧಿ ಸಂತೋಷ್ ಹಾಗೂ ಚಾಲಕ ಚಿನ್ನಪ್ಪ ಅವರೊಂದಿಗೆ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ: ಪಂಜಾಬ್​​ನಲ್ಲಿ ಬಸ್‌ಗಳಿಗೆ ಬೆಂಕಿ.. ಓರ್ವ ಸಜೀವ ದಹನ

ಚಿಕ್ಕ ಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.