ETV Bharat / city

ತುಮಕೂರು- ಬೆಂಗಳೂರು ನಡುವೆ ಮೆಮು ವಿಶೇಷ ರೈಲು ಸಂಚಾರ ಆರಂಭ

author img

By

Published : Apr 9, 2022, 8:41 PM IST

Updated : Apr 9, 2022, 8:59 PM IST

ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ತುಮಕೂರು-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾರೆ. ಇದರಿಂದಾಗಿ ಡೆಮು ರೈಲಿನಲ್ಲಿ ಪ್ರಯಾಣ ಮಾಡುವುದು ಸಾಕಷ್ಟು ಪ್ರಯಾಸದಾಯಕವಾಗಿತ್ತು. ಹೀಗಾಗಿ, ಈ ರೈಲಿನಲ್ಲಿ 16 ಬೋಗಿಗಳನ್ನು ಸೇರಿಸಲಾಗುತ್ತಿದೆ. ನಿತ್ಯ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಬೆ.11ಕ್ಕೆ ತುಮಕೂರಿನ ರೈಲ್ವೆ ನಿಲ್ದಾಣವನ್ನು ತಲುಪಲಿದೆ..

special-train
ವಿಶೇಷ ರೈಲು

ತುಮಕೂರು : ಬಹುನಿರೀಕ್ಷಿತ ತುಮಕೂರು-ಬೆಂಗಳೂರು ನಡುವಿನ ಮೆಮು ವಿಶೇಷ ರೈಲು ಸಂಚಾರಕ್ಕೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಸಂಸದ ಬಸವರಾಜು ಇಂದು ಹಸಿರು ನಿಶಾನೆ ತೋರಿದರು. ಬೆಂಗಳೂರು-ತುಮಕೂರು ನಡುವಿನ ಈ ರೈಲು ವಿದ್ಯುತ್​ನಿಂದ ಚಲಿಸುವಂತದ್ದಾಗಿದೆ. ಎರಡು ನಗರಗಳ ಮಧ್ಯೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಕಾರಣ ಈ ರೈಲು ಆರಂಭಕ್ಕೆ ಹೆಚ್ಚಿನ ನಿರೀಕ್ಷೆ ಇತ್ತು.

ಹೆಚ್ಚಿನ ಪ್ರಯಾಣಿಕರ ಸಂಚಾರಕ್ಕಾಗಿ 8 ಬೋಗಿಗಳಿದ್ದ ಈ ರೈಲನ್ನು 16 ಬೋಗಿಗಳಿಗೆ ಪರಿವರ್ತಿಸಲಾಗಿದೆ. ಕ್ಯಾತ್ಸಂದ್ರ, ಹಿರೇಹಳ್ಳಿ, ದಾಬಸ್​ಪೇಟೆ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಬೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣಾವರ, ಯಶವಂತಪುರ ಮತ್ತು ಮಲ್ಲೇಶ್ವರಂನಲ್ಲಿ ನಿಲುಗಡೆಗೊಳಿಸಲಾಗುತ್ತದೆ.

ತುಮಕೂರು- ಬೆಂಗಳೂರು ನಡುವೆ ಮೆಮು ವಿಶೇಷ ರೈಲು ಸಂಚಾರ ಆರಂಭ

ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ತುಮಕೂರು-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾರೆ. ಇದರಿಂದಾಗಿ ಡೆಮು ರೈಲಿನಲ್ಲಿ ಪ್ರಯಾಣ ಮಾಡುವುದು ಸಾಕಷ್ಟು ಪ್ರಯಾಸದಾಯಕವಾಗಿತ್ತು. ಹೀಗಾಗಿ, ಈ ರೈಲಿನಲ್ಲಿ 16 ಬೋಗಿಗಳನ್ನು ಸೇರಿಸಲಾಗುತ್ತಿದೆ. ನಿತ್ಯ ಬೆಳಗ್ಗೆ 9:30ಕ್ಕೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಬೆ.11ಕ್ಕೆ ತುಮಕೂರಿನ ರೈಲ್ವೆ ನಿಲ್ದಾಣವನ್ನು ತಲುಪಲಿದೆ.

11.15ಕ್ಕೆ ಪುನಃ ತುಮಕೂರು ರೈಲ್ವೆ ನಿಲ್ದಾಣದಿಂದ ಹೊರಟು 1.50ಕ್ಕೆ ಬೆಂಗಳೂರಿನ ಕೆಂಪೇಗೌಡ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ ದಿನಕ್ಕೆ 2 ಬಾರಿ ಸಂಚಾರ ನಡೆಸಲಿದೆ ಎಂದು ತಿಳಿದು ಬಂದಿದೆ.

ಓದಿ: ವ್ಹೀಲಿಂಗ್ ಮಾಡಲು ಹೋಗಿ ಮಹಿಳೆಗೆ ಗುದ್ದಿದ ಯುವಕರು!

Last Updated : Apr 9, 2022, 8:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.