ETV Bharat / city

ದಾಸೋಹ ದಿನ: ಸಿದ್ದಗಂಗಾ ಮಠದಲ್ಲಿ ಮಕ್ಕಳಿಗೆ ಪಾಯಸ, ಬೂಂದಿ ಬಡಿಸಿದ ಸಿಎಂ - ಶಿವಕುಮಾರ ಸ್ವಾಮೀಜಿ ಅವರ 3ನೆ ಪುಣ್ಯ ಸ್ಮರಣೆ

ಶಿವಕುಮಾರ್ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ದಾಸೋಹ ದಿನವನ್ನಾಗಿ ಆಚರಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಅವರು ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿ, ದಾಸೋಹ ದಿನಕ್ಕೆ ಚಾಲನೆ ನೀಡಿದರು.

ಸಿದ್ದಗಂಗಾ ಮಠದಲ್ಲಿ ಮಕ್ಕಳಿಗೆ ಊಟ ಬಡಿಸಿದ ಸಿಎಂ

author img

By

Published : Jan 21, 2022, 12:13 PM IST

Updated : Jan 21, 2022, 12:49 PM IST

ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ 3ನೆ ಪುಣ್ಯ ಸ್ಮರಣೆ ನಿಮಿತ್ತ ಇಂದು ಸಿದ್ಧಗಂಗಾ ಮಠದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಕ್ಕಳಿಗೆ ಊಟ ಬಡಿಸುವ ಮೂಲಕ ಸರ್ಕಾರದ ದಾಸೋಹ ದಿನದ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ದಾಸೋಹ ದಿನದ ಹಿನ್ನೆಲೆಯಲ್ಲಿ ಮಠಕ್ಕೆ ಆಗಮಿಸಿದ ಸಿಎಂ, ಇಲ್ಲಿನ ಊಟದ ಮನೆಗೆ ತೆರಳಿ ಮಠದ ಮಕ್ಕಳಿಗೆ ಪಾಯಸ ಹಾಗೂ ಸಿಹಿ ಬೂಂದಿ ಬಡಿಸಿದರು. ಈ ವೇಳೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಮಾಧುಸ್ವಾಮಿ ಹಾಗೂ ಬಿಸಿ ನಾಗೇಶ್ ಉಪಸ್ಥಿತರಿದ್ದರು.

ಸಿದ್ದಗಂಗಾ ಮಠದಲ್ಲಿ ಸಿಎಂ

ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯಂದು ಸರ್ಕಾರ ದಾಸೋಹ ದಿನವೆಂದು ಘೋಷಣೆ ಮಾಡಿದೆ. ಇದಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ಮಠಮಾನ್ಯಗಳಿಗೆ ದವಸಧಾನ್ಯಗಳನ್ನು ನೀಡುವುದು ಹಾಗೂ ಜನರಿಗೆ ಪಡಿತರ ಚೀಟಿ ಮೂಲಕ ಹೆಚ್ಚಿನ ಅಕ್ಕಿಯನ್ನು ನೀಡುವ ಯೋಜನೆಯನ್ನು ಮುಂದುವರಿಸುವ ಮೂಲಕ ದಾಸೋಹ ದಿನವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಇದೇ ವೇಳೆ ತಿಳಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.