ತುಮಕೂರು/ಪಾವಗಡ: ತಾಲೂಕಿನ ನಾಗಲಾಪುರ ಕೆರೆಯಲ್ಲಿ ಮೀನಿಗಾಗಿ ಆಂಧ್ರ ಪ್ರದೇಶದ ಪೆರೂರು, ಕಂಬದೂರು, ಕಲ್ಯಾಣದುರ್ಗದ 200ಕ್ಕೂ ಹೆಚ್ಚು ಜನ ಸಾಮಾಜಿಕ ಕಾಯ್ದುಕೊಳ್ಳದೆ ಮೀನಿಗಾಗಿ ಮುಗಿಬಿದ್ದಿದ್ದರು.
ಮೀನು ಹಿಡಿಯಲು ಮಾಜಿ ತಾಪಂ ಅದ್ಯಕ್ಷ ಟೆಂಪೋ ಗೋವಿಂದಪ್ಪನ ಸಹಕಾರದಿಂದ ಪ್ರತಿದಿನ ಆಂರ್ಧರದ ನೂರಾರು ಜನತೆ ಆಕ್ರಮವಾಗಿ ಗಡಿ ಪ್ರವೇಶಿಸುತ್ತಿರುವುದು ಸ್ಥಳೀಯರಿಗೆ ಆತಂಕ ಹುಟ್ಟಿಸಿದೆ. ಅಲ್ಲದೇ ಇದನ್ನು ವಿಡಿಯೋ ಮಾಡಿದ ಯುವಕರಿಗೆ ವೈ.ಎನ್.ಹೋಸಕೋಟೆ ಪೊಲೀಸರು ಬೆದರಿಕೆ ಹಾಕಿದ್ದಲ್ಲದೇ, ಮನೆಗೆ ತೆರಳಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.