ತುಮಕೂರು: ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಬೋಧಿಸಲು ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಪಠ್ಯಪುಸ್ತಕ ಸಮಿತಿ ಮುಂದಾಗಿದೆ. ಭಗವದ್ಗೀತೆಯನ್ನು ಬೇರೆ ಧಾರ್ಮಿಕ ಗ್ರಂಥಗಳಿಗೆ ಹೋಲಿಕೆ ಮಾಡುವುದು ತಪ್ಪು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಶಿರಾ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯು ಧರ್ಮ ಗ್ರಂಥವಲ್ಲ. ಅದು ಮೌಲ್ಯಗಳನ್ನು ಬಿತ್ತರಿಸುವ ಭಂಡಾರ. ಇದು ಮಕ್ಕಳಿಗೆ ನೈತಿಕತೆಯನ್ನು ಕಲಿಸಿಕೊಡುತ್ತದೆ. ಸಂಶೋಧಕ ಆಲ್ಬರ್ಟ್ ಐನ್ಸ್ಟೀನ್ ನನ್ನೆಲ್ಲಾ ಸಂಶೋಧನೆಗೆ ಮತ್ತು ಕೆಲಸಕ್ಕೆ ಭಗವದ್ಗೀತೆ ಸ್ಪೂರ್ತಿಯಾಗಿದೆ ಎಂದಿದ್ದಾರೆ. ಆತ ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತನೂ ಅಲ್ಲ, ಹಿಂದೂ ಮುಖಂಡನೂ ಅಲ್ಲ. ಆದರೂ ಭಗವದ್ಗೀತೆಯನ್ನು ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಭಗವದ್ಗೀತೆಯನ್ನು ಧಾರ್ಮಿಕ ಗ್ರಂಥದ ಸ್ವರೂಪಕ್ಕೆ ಹೋಲಿಕೆ ಮಾಡುತ್ತಿರುವ ಹುನ್ನಾರ ನಡೆಯುತ್ತಿದೆ. ಇದೊಂದು ವೋಟ್ ಬ್ಯಾಂಕ್ ರಾಜಕಾರಣವಾಗಿದೆ ಎಂದು ಶಿಕ್ಷಣ ಸಚಿವರು ಟೀಕಿಸಿದರು.
ಓದಿ: ಸಾರಿಗೆ ನಿಗಮದ ಇತಿಹಾಸದಲ್ಲೇ ಪ್ರಥಮ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣ ಮನ್ನಾ