ತುಮಕೂರು: ಬೆಂಗಳೂರಿನಲ್ಲಿಯೇ ಪ್ರಗತಿಪರ ರೈತರಿಗೆ 'ಕೃಷಿ ಕರ್ಮಣ್ ಪ್ರಶಸ್ತಿ' ವಿತರಣೆ ಮತ್ತು 'ಕಿಸಾನ್ ಸಮ್ಮಾನ್ ನಿಧಿ' ಯೋಜನೆ ವಿಸ್ತರಣೆ ಕಾರ್ಯಕ್ರಮವನ್ನು ಈ ಮೊದಲು ನಿಗದಿ ಮಾಡಲಾಗಿತ್ತು. ಆದರೆ, ಪ್ರಧಾನಿ ಮೋದಿ ಅವರೇ ಕಾರ್ಯಕ್ರಮ ಅಲ್ಲಿ ಬೇಡ ಎಂದು ಸೂಚಿಸಿದ್ದರು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
ಬೆಂಗಳೂರು ಹೊರತುಪಡಿಸಿ ಅದರ ಪಕ್ಕದ ಜಿಲ್ಲೆಗಳಲ್ಲೇ ಈ ಕಾರ್ಯಕ್ರಮ ಆಯೋಜಿಸಬೇಕು. ತುಮಕೂರಿನಲ್ಲಿ ಮಠವಿದೆ, ಶ್ರೀಗಳ ಗದ್ದುಗೆ ದರ್ಶನ ಹಾಗೂ ಮಠದ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆಯಬಹುದು ಎಂದು ಸ್ವತ: ಪ್ರಧಾನಿ ಮೋದಿ ಹೇಳಿದ್ದರು ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ರು.
ಈ ಯೋಜನೆಯಡಿ 6 ಕೋಟಿ ರೈತ ಕುಟುಂಬಗಳ ಖಾತೆಗೆ ₹ 12,000 ಕೋಟಿ ವರ್ಗಾವಣೆ ಪ್ರಕ್ರಿಯೆಗೆ ಮೋದಿ ಚಾಲನೆ ನೀಡಲಿದ್ದಾರೆ. 2022 ರೊಳಗೆ ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಚಿಂತನೆಯನ್ನು ಪ್ರಧಾನಿ ಹೊಂದಿದ್ದಾರೆ. ಹೀಗಾಗಿ ಅವರು ನಿರಂತರವಾಗಿ ಕೃಷಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ತಿಳಿಸಿದರು.