ETV Bharat / city

ಶಿವರಾಮೇಗೌಡರಿಂದ ಒಕ್ಕಲಿಗ-ಬಲಿಜ ಸಮುದಾಯ ಒಡೆಯುವ ಯತ್ನ: ಕವಿತಾ ಕೃಷ್ಣ ಆಕ್ರೋಶ - Kavita Krishna

ಚುನಾವಣಾ ಪ್ರಚಾರದಲ್ಲಿ ಜಾತ್ಯತೀತ ಎಂಬ ಹೆಸರನ್ನು ಇಟ್ಟುಕೊಂಡಿರುವ ಜನತಾದಳದ ಸಂಸದರಾದ ಶಿವರಾಮೇಗೌಡ ಒಕ್ಕಲಿಗ ಮತ್ತು ಬಲಿಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಲಿಜ ಸಮಾಜದ ಮುಖಂಡರಾದ ಕವಿತಾ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಬಲಿಜ ಸಮಾಜದ ಮುಖಂಡರ ಸಭೆ
author img

By

Published : Apr 10, 2019, 2:04 PM IST

ತುಮಕೂರು: ಮಂಡ್ಯದ ಹಾಲಿ ಸಂಸದರಾದ ಶಿವರಾಮೇಗೌಡ ಅವರು ಇತ್ತೀಚಿಗೆ ಚುನಾವಣಾ ಪ್ರಚಾರದ ವೇಳೆ ಬಲಿಜ ಸಮಾಜದ ಮುಖಂಡರು ಹಾಗೂ ಚಲನಚಿತ್ರ ನಟರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಬಲಿಜ ಸಮಾಜದ ಮುಖಂಡರಾದ ಕವಿತಾ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಬಲಿಜ ಸಮಾಜದಲ್ಲಿ ಅನೇಕ ಮುಖಂಡರು, ಸಮಾಜದ ಸೇವಕರು ಸೇರಿದಂತೆ ಇತಿಹಾಸ ಸೃಷ್ಟಿಸಿದ ಅನೇಕ ನಾಯಕರು, ದಾರ್ಶನಿಕರು ಇದ್ದಾರೆ. ಪ್ರಸ್ತುತವಾಗಿ ಚಲನಚಿತ್ರ ರಂಗದ ನಟರ ಬಗ್ಗೆ ಹಾಲಿ ಸಂಸದ ಶಿವರಾಮೇಗೌಡರು ಜಾತಿ ನಿಂದನೆ ಮಾಡಿ, ಮಾತನಾಡಿರುವುದು ಖಂಡಿನೀಯ. ಚುನಾವಣಾ ಪ್ರಚಾರದಲ್ಲಿ ಜಾತ್ಯತೀತ ಎಂಬ ಹೆಸರನ್ನು ಇಟ್ಟುಕೊಂಡಿರುವ ಜನತಾದಳದ ಸಂಸದರಾದ ಶಿವರಾಮೇಗೌಡ ಒಕ್ಕಲಿಗ ಮತ್ತು ಬಲಿಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದೇ ಪಕ್ಷದವರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರಾಗಲಿ ಈ ವಿಷಯದ ಬಗ್ಗೆ ಚಕಾರ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತುಮಕೂರಿನಲ್ಲಿ ಬಲಿಜ ಸಮಾಜದ ಮುಖಂಡರ ಸಭೆ

ಸುಮಲತಾ, ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಕೂಡ ಬಲಿಜ ಸಮಾಜದವರು. ಇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಇದು ಬಲಿಜ ಜನಾಂಗಕ್ಕೆ ಮಾಡಿದಂತಹ ಅವಮಾನವಾಗಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ದರ್ಶನ್ ಮತ್ತು ಯಶ್ ಅವರನ್ನು ಕಳ್ಳೆತ್ತು ಎಂದು ಸಂಬೋಧಿಸಿದ್ದಾರೆ. ಹೆಚ್.ಡಿ ರೇವಣ್ಣ ಸುಮಲತಾ ಅವರನ್ನು ವಿಧವೆ ಎಂದು ಸಂಬೋಧಿಸಿರುವುದು ಖಂಡನೀಯ. ಈ ಕೂಡಲೇ ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್ ಅವರ ಹತ್ತಿರ ಕ್ಷಮೆ ಯಾಚಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಹೆಬ್ಬೂರು ರಂಗಯ್ಯ, ಶಿವರಾಮೇಗೌಡರು ಈ ಮುಂಚೆ ಯಾವ ಸ್ಥಿತಿಯಲ್ಲಿ ಇದ್ದರು, ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಅರಿತು ಮಾತನಾಡಬೇಕುಎಂದರು.

ನಂತರ ಟೌನ್ಹಾಲ್ ವೃತ್ತದಲ್ಲಿ ಜಮಾಯಿಸಿದ ಸಮಾಜದ ಮುಖಂಡರು ಶಿವರಾಮೇಗೌಡರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

Intro:ತುಮಕೂರು: ಮಂಡ್ಯದ ಹಾಲಿ ಸಂಸದರಾದ ಶಿವರಾಮೇಗೌಡ ಅವರು ಇತ್ತೀಚಿಗೆ ಚುನಾವಣಾ ಪ್ರಚಾರದ ವೇಳೆ ಬಲಿಜ ಸಮಾಜದ ಮುಖಂಡರು ಹಾಗೂ ಚಲನಚಿತ್ರ ನಟರ ಮೇಲೆ ಅವಹೇಳನಕಾರಿಯಾಗಿ ನಿಂದಿಸಿರುವುದು ಖಂಡನೀಯ ಎಂದು ಸಮಾಜದ ಮುಖಂಡರಾದ ಕವಿತಾ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

Body:ಬಲಿಜ ಸಮಾಜದಲ್ಲಿ ಅನೇಕ ಮುಖಂಡರು, ಸಮಾಜದ ಸೇವಕರು ಸೇರಿದಂತೆ ಇತಿಹಾಸ ಸೃಷ್ಟಿಸಿದ ಅನೇಕ ನಾಯಕರು, ದಾರ್ಶನಿಕರು ಇದ್ದಾರೆ.
ಪ್ರಸ್ತುತವಾಗಿ ಚಲನಚಿತ್ರ ರಂಗದ ನಟರ ಬಗ್ಗೆ ಹಾಲಿ ಸಂಸದ ಶಿವರಾಮೇಗೌಡರು ಜಾತಿನಿಂದನೆ ಮಾಡಿ, ಮಾತನಾಡಿರುವುದನ್ನು ಖಂಡಿಸಿದರು.
ಚುನಾವಣಾ ಪ್ರಚಾರದಲ್ಲಿ ಜಾತ್ಯತೀತ ಎಂಬ ಹೆಸರನ್ನು ಇಟ್ಟುಕೊಂಡಿರುವ ಜನತಾದಳದ ಸಂಸದರಾದ ಶಿವರಾಮೇಗೌಡ ಒಕ್ಕಲಿಗ ಮತ್ತು ಬಲಿಜ ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದೇ ಪಕ್ಷದವರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರಾಗಲಿ ಈ ವಿಷಯದ ಬಗ್ಗೆ ಚಕಾರ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಈ ನಾಡಿನಲ್ಲಿ ನಮ್ಮ ಮತಗಳ ಸಂಖ್ಯೆ ಚುನಾವಣಾ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ಮರೆತಿದ್ದಾರೆ.
ಬೆಂಗಳೂರಿನಿಂದ ಮಂಡ್ಯಕ್ಕೆ ಬರುತ್ತಾರೆ ಎಂದು ಹೇಳುವ ಶಿವರಾಮೇಗೌಡರಿಗೆ ಮಂಡ್ಯವನ್ನು ಇವರೇನು ಗುತ್ತಿಗೆ ಪಡೆದು ಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಬಲಿಜ ಜನಾಂಗವು ಶಿಕ್ಷಣ, ಉದ್ಯಮ, ವ್ಯಾಪಾರ ಹೀಗೆ ಎಲ್ಲಾ ಮಟ್ಟದಲ್ಲೂ ಬೆಳೆದಿದೆ ಹಾಗೂ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಬಲಿಜ ಜನಾಂಗದ ಕೊಡುಗೆಯು ಅಪಾರ ಎಂದರು.
ಸುಮಲತಾ, ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಕೂಡ ಬಲಿಜ ಸಮಾಜದವರು ಇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಇದು ಬಲಿಜ ಜನಾಂಗಕ್ಕೆ ಮಾಡಿದಂತಹ ಅವಮಾನವಾಗಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ದರ್ಶನ್ ಮತ್ತು ಯಶ್ ಅವರನ್ನು ಕಳ್ ಎತ್ತು ಎಂದು ಸಂಬೋಧಿಸಿದ್ದಾರೆ, ಹೆಚ್.ಡಿ ರೇವಣ್ಣ ಸುಮಲತಾ ಅವರನ್ನು ವಿಧವೆ ಎಂದು ಸಂಬೋಧಿಸಿರುವುದು ಖಂಡನೀಯ. ಈ ಕೂಡಲೇ ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್ ಅವರ ಹತ್ತಿರ ಕ್ಷಮೆ ಯಾಚಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

Conclusion:ನಂತರ ಮಾತನಾಡಿದ ಹೆಬ್ಬೂರು ರಂಗಯ್ಯ, ಶಿವರಾಮೇಗೌಡರು ಈ ಮುಂಚೆ ಯಾವ ಸ್ಥಿತಿಯಲ್ಲಿ ಇದ್ದರು, ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಅರಿತು ಮಾತನಾಡಬೇಕು. ಯಾವುದೇ ಜಾತಿ, ಧರ್ಮದ ಬಗ್ಗೆ ಮಾತನಾಡಬಾರದು. ಪ್ರತಿಯೊಬ್ಬರಿಗೂ ಅವರದೇ ಅದಂತಹ ಗೌರವ, ಘನತೆ ಇರುತ್ತದೆ. ಆದರೆ ಶಿವರಾಮೇಗೌಡರು ದುರಹಂಕಾರ ಮಾತುಗಳನ್ನಾಡಿದ್ದಾರೆ.
ಈ ನಿಟ್ಟಿನಲ್ಲಿ ದೇವೇಗೌಡರ ವಿರುದ್ಧವಾಗಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಅವರಿಗೆ ಮತ ನೀಡುವಂತೆ ಸಮಾಜದ ಬಂಧುಗಳಲ್ಲಿ ಮನವಿ ಮಾಡಿಕೊಂಡರು.
ನಂತರ ಟೌನ್ಹಾಲ್ ವೃತ್ತದಲ್ಲಿ ಜಮಾಯಿಸಿದ ಸಮಾಜದ ಮುಖಂಡರು ಶಿವರಾಮೇಗೌಡ ರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ವರದಿ
ಸುಧಾಕರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.