ETV Bharat / city

ತುಮಕೂರಲ್ಲಿ ವಿಶ್ವದ ಬೃಹತ್ ಸೋಲಾರ್​ ಪಾರ್ಕ್ ಕಂಡು ಅಚ್ಚರಿಗೊಂಡ ವಿದೇಶಿಗರು! - undefined

ಪ್ರಪಂಚದ ಅತಿದೊಡ್ಡ ಸೋಲಾರ್​ ಪಾರ್ಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಪಾವಗಡ ಸೋಲಾರ್ ಪಾರ್ಕ್​ಗೆ ಇಂಟರ್ ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ 40ಕ್ಕೂ ಹೆಚ್ಚು ಸದಸ್ಯ ದೇಶಗಳ ತಂಡ ಆಗಮಿಸಿ, ಮಾಹಿತಿ ಪಡೆದರು.

ತುಮಕೂರು
author img

By

Published : May 22, 2019, 2:27 AM IST

ತುಮಕೂರು: ಇಂಟರ್ ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ 40ಕ್ಕೂ ಹೆಚ್ಚು ಸದಸ್ಯ ದೇಶಗಳ ತಂಡವು ತುಮಕೂರು ಜಿಲ್ಲೆ ಪಾವಗಡದಲ್ಲಿರುವ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್​ಗೆ ಭೇಟಿ ನೀಡಿದರು.

ತುಮಕೂರು

ಪ್ರಪಂಚದ ಅತಿದೊಡ್ಡ ಸೋಲಾರ್​ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಪಾವಗಡ ಸೋಲಾರ್ ಪಾರ್ಕ್​ಗೆ ಆಗಮಿಸಿದ ಯೂನಿಯನ್ ಆಫ್ ಕೋಮೋರೋಸ್ ರಿಪಬ್ಲಿಕ್ ಆಫ್ ಪಿಜಿ, ಫಾನಾ ಫೆಡರೇಶನ್ ಆಫ್ ಮಲೇಶಿಯಾ, ಮಾರ್ಷಿಯಸ್ ಉಗಾಂಡಾ, ಬ್ರೆಜಿಲ್, ಜಾಂಬಿಯೂ ಸೇರಿದಂತೆ ಇಂಟರ್​ ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ ಸದಸ್ಯ ದೇಶಗಳ ರಾಯಭಾರಿಗಳು, ಹೈಕಮೀಷನರ್​ಗಳು ಹಾಗೂ ಐಎಸ್ಎ ಮುಖ್ಯಸ್ಥರು ಇಲ್ಲಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಸೋಲಾರ್​ ಪಾರ್ಕ್​ ಬಳಿ ಸೆಲ್ಫಿ ತೆಗೆದುಕೊಂಡು, ಸಸಿ ನೆಟ್ಟು ಖುಷಿಪಟ್ಟರು.

Tumkur
ತುಮಕೂರು

ಪಾವಗಡ ಸೋಲಾರ್ ಪಾರ್ಕ್​ ಸಂರಚನೆಯನ್ನು ವೀಕ್ಷಿಸಿದ ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುಮಾರು 2000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರಶಕ್ತಿಯನ್ನು ಉತ್ಪಾದಿಸುವ ಪಾವಗಡ ಸೋಲಾರ್ ಪಾರ್ಕ್​ ಅನ್ನು ರೈತರಿಂದ ಎಕರೆಗೆ ವಾರ್ಷಿಕ 21 ಸಾವಿರ ರೂ. ಮೊತ್ತಕ್ಕೆ 28 ವರ್ಷಗಳ ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

Tumkur
ತುಮಕೂರು

ಬಿರು ಬಿಸಿಲಿನಲ್ಲಿಯೇ ವಿದೇಶಿ ಗಣ್ಯರ ತಂಡವು ಪೊರ್ಟಮ್, ರೀನ್ಯೂ ಪವರ್, ಪಿಜಿಸಿಎಲ್ ಕೇಂದ್ರಕ್ಕೆ ಭೇಟಿ ನೀಡಿ ಸೋಲಾರ್ ವಿದ್ಯುತ್ ತಯಾರಿಕೆಯ ಕುರಿತಂತೆ ಮಾಹಿತಿಯನ್ನು ಪಡೆಯಿತು. ಸೋಲಾರ್ ಪಾರ್ಕ್​ ವೀಕ್ಷಿಸಿದ ಯೂನಿಯನ್ ಆಫ್ ಕೊಮಾರಸ್​​ (Union of comoros) ಕನ್ಸಲ್ ಕೆ.ಎಲ್. ಗಂಜು ಅವರು, ಪ್ರಪಂಚದ ಅತಿದೊಡ್ಡ ಸೋಲಾರ್ ಪಾರ್ಕ್​​ ಅನ್ನು ಸ್ಥಾಪಿಸಿರುವುದು ಕರ್ನಾಟಕ ರಾಜ್ಯದ ಬಹುದೊಡ್ಡ ಸಾಧನೆ. ಇಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು ಉತ್ತಮ ಸೇವೆಯನ್ನು ದೇಶಕ್ಕೆ ನೀಡಲಿ ಎಂಬ ತಮ್ಮ ಅನಿಸಿಕೆ ಹಂಚಿಕೊಂಡರು.

ಇದೇ ವೇಳೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕೆಪಿಟಿಸಿಎಲ್​ನ ವ್ಯವಸ್ಥಾಪಕ ನಿರ್ದೇಶಕ ಸೆಲ್ವ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಸೌರಶಕ್ತಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಜರಿದ್ದರು.

Intro:ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಕಂಡು ಅಚ್ಚರಿ ವ್ಯಕ್ತಪಡಿಸಿದ ವಿದೇಶಿಯರು…..
ತುಮಕೂರು
ಇಂಟರ್ನ್ಯಾ ಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ 40ಕ್ಕೂ ಹೆಚ್ಚು ಸದಸ್ಯ ದೇಶಗಳ ತಂಡವು ತುಮಕೂರು ಜಿಲ್ಲೆ ಪಾವಗಡದಲ್ಲಿರುವ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವೀಕ್ಷಿಸಿ, ಸೆಲ್ಪಿ ತೆಗೆದುಕೊಂಡ್ರು… ಸಸಿ ನೆಟ್ಟರು… ಪೋಟ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.
ಪ್ರಪಂಚದ ಅತಿದೊಡ್ಡ ಸೋಲಾರ ಪಾರ್ಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಪಾವಗಡ ಸೋಲಾರ್ ಪಾರ್ಕ್ಗೆಡ ಆಗಮಿಸಿದ ಯೂನಿಯನ್ ಆಫ್ ಕೋಮೋರೋಸ್ ರಿಪಬ್ಲಿಕ್ ಆಫ್ ಪಿಜಿ, ಫಾನಾ ಫೆಡರೇಶನ್ ಆಫ್ ಮಲೇಶಿಯಾ, ಮಾರ್ಷಿಯಸ್ ಉಗಾಂಡಾ, ಬ್ರೆಜಿಲ್, ಜಾಂಬಿಯೂ ಸೇರಿದಂತೆ ಇಂಟರ್ನ್ಯಾ ಷನಲ್ ಸೋಲಾರ್ ಅಲೈಯನ್ಸ್ ಸಂಸ್ಥೆಯ ಸದಸ್ಯ ದೇಶಗಳ ರಾಯಭಾರಿಗಳು, ಹೈಕಮೀಷನರ್ಸ್ ಹಾಗೂ ಐಎಸ್ಎ ಮುಖ್ಯಸ್ಥರುಗಳು, ಸೋಲಾರ್ ಪಾರ್ಕ್ಗೆಕ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದರು.
         ಮೊದಲು ಸೋಲಾರ್ ಪಾರ್ಕ್ನ ಮಾಡೆಲ್ ರೂಮ್ಗೆಟ ಆಗಮಿಸಿದ ತಂಡ, ಪಾವಗಡ ಸೋಲಾರ್ ಪಾರ್ಕ್ನ ಸಂರಚನೆಯನ್ನು ವೀಕ್ಷಿಸಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಸುಮಾರು 2000 ಮೆಗಾ ವ್ಯಾಟ್ ಸಾಮಥ್ಯಧ ಸೌರಶಕ್ತಿಯನ್ನು ಉತ್ಪಾದಿಸುವ ಪಾವಗಡ ಸೋಲಾರ್ ಪಾರ್ಕ್ನ್ನು ರೈತರಿಂದ 1 ಎಕರೆಗೆ ವಾರ್ಷಿಕ 21 ಸಾವಿರ ರೂ. ಲೀಸ್ ಮೊತ್ತಕ್ಕೆ 28 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
         ಬಿರು ಬಿಸಿಲಿನಲ್ಲಿಯೇ ವಿದೇಶಿ ಗಣ್ಯರ ತಂಡವು ಪೊರ್ಟಮ್, ರೀನ್ಯೂ ಪವರ್, ಪಿಜಿಸಿಎಲ್ ಕೇಂದ್ರಕ್ಕೆ ಭೇಟಿ ನೀಡಿ ಸೋಲಾರ್ ವಿದ್ಯುತ್ ತಯಾರಿಕೆಯ ಕುರಿತಂತೆ ಮಾಹಿತಿಯನ್ನು ಪಡೆಯಿತು. ಅಲ್ಲದೇ ಸೋಲಾರ್ ಪಾರ್ಕ್ನ್ನುಕ ಒಂದು ರೌಂಡ್ ಹಾಕಿದ ತಂಡ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ನ್ನುು ಕುತೂಹಲದಿಂದ ವೀಕ್ಷಿಸಿ ರಾಜ್ಯ ಸರ್ಕಾರದ ಮಹತ್ವದ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿತು.
         ಸೋಲಾರ್ ಪಾರ್ಕ್ನ್ನುಶ ವೀಕ್ಷಿಸಿದ ಯೂನಿಯನ್ ಆಫ್ ಕೊಮಾರಸ್ನ (Union of comoros) ಕನ್ಸಲ್ ಕೆ.ಎಲ್. ಗಂಜು ಅವರು ಅಧಿಕಾರಿಗಳೊಂದಿಗೆ ಪ್ರಪಂಚದ ಅತಿದೊಡ್ಡ ಸೋಲಾರ್ ಪಾರ್ನ್ನು ಸ್ಥಾಪಿಸಿರುವುದು ಕರ್ನಾಟಕ ರಾಜ್ಯದ ಬಹುದೊಡ್ಡ ಸಾಧನೆ. ಇಲ್ಲಿ ಸ್ಥಾಪನೆಯಾಗಿರುವ ಕಂಪನಿಗಳು ಉತ್ತಮ ಸೇವೆಯನ್ನು ದೇಶಕ್ಕೆ ನೀಡಲಿ ಎಂಬ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಐಎಸ್ಎ ಸದಸ್ಯ ದೇಶಗಳಿಂದ ಆಗಮಿಸಿದ ತಂಡದ ಸದಸ್ಯರುಗಳು ಸೋಲಾರ್ಪಾ ರ್ಕ್ನ ಉಪಕೇಂದ್ರ 4ರಲ್ಲಿ ಭೇಟಿಯ ನೆನಪಿಗಾಗಿ ಸಸಿಗಳನ್ನು ನೆಟ್ಟರು.
ಇದೇ ವೇಳೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಸೆಲ್ವ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಸೌರಶಕ್ತಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಜರಿದ್ದರು.
Body:tumakuruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.