ETV Bharat / city

ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 112ನೇ ಜನ್ಮದಿನೋತ್ಸವಕ್ಕೆ ಸಕಲ ಸಿದ್ಧತೆ

ಶ್ರೀಗಳು ಲಿಂಗೈಕ್ಯರಾದ ನಂತರ ಮೊದಲನೇ ಹುಟ್ಟುಹಬ್ಬ ನಡೆಯುತ್ತಿದ್ದು, ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ  ಹತ್ತು ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಜರ್ಮನ್ ಶೈಲಿಯ ವೇದಿಕೆ ಸಿದ್ದವಾಗುತ್ತಿದೆ.

ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸವಕ್ಕೆ ಸಕಲ ಸಿದ್ಧತೆ
author img

By

Published : Mar 31, 2019, 11:26 PM IST

ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 112ನೇ ಜನ್ಮದಿನೋತ್ಸವದ ಸಮಾರಂಭಕ್ಕಾಗಿ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಶ್ರೀಗಳು ಲಿಂಗೈಕ್ಯರಾದ ನಂತರ ಮೊದಲನೇ ಹುಟ್ಟುಹಬ್ಬ ನಡೆಯುತ್ತಿದ್ದು, ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಜರ್ಮನ್ ಶೈಲಿಯ ವೇದಿಕೆ ಸಿದ್ದವಾಗುತ್ತಿದೆ. ವೇದಿಕೆಯ ಮೇಲೆ ರಾಜ್ಯದ ವಿವಿಧ ಮಠಾಧೀಶರು ಹಾಗೂ ವೇದಿಕೆಯ ಮುಂಭಾಗ ವಿವಿಧ ಗಣ್ಯರು ಕುಳಿತುಕೊಳ್ಳಲು ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಲಾಗಿದ್ದು, ಅದರ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸವಕ್ಕೆ ಸಕಲ ಸಿದ್ಧತೆ

ಬೆಳಗ್ಗೆ ಪ್ರಥಮವಾಗಿ ಕಿರಿಯ ಶ್ರೀಗಳು ಶಿವ ಪೂಜೆಯನ್ನು ಮಾಡಿ, ಏಳು ಗಂಟೆಗೆ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು ಮಹಾಮಂಗಳಾರತಿ ಮೂಲಕ ಲಿಂಗೈಕ್ಯರಾದ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ತದನಂತರ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುವುದು. ಈ ಬಾರಿ ವಿಶೇಷವಾಗಿ 112 ನವಜಾತ ಮಕ್ಕಳಿಗೆ ಶ್ರೀಗಳ ಹೆಸರಿನ ಅಂದರೆ ಶಿವಕುಮಾರ, ಶಿವಣ್ಣ, ಶಿವಯ್ಯ, ಶಿವಮ್ಮ ಹೀಗೆ ನಾಮಕರಣ ಮಾಡಲಾಗುವುದು, ಎಲ್ಲಾ ಮಕ್ಕಳಿಗೂ ತೊಟ್ಟಿಲು, ಶ್ರೀಗಳ ಭಾವಚಿತ್ರವಿರುವ ಬೆಳ್ಳಿಯ ಪದಕ, ಹಾಸಿಗೆ ಹಾಗೂ ಸಿದ್ದಲಿಂಗ ಶ್ರೀಗಳಿಂದ ಆಶೀರ್ವಚನ ನೀಡಲಾಗುವುದು ಎಂದು ಮಠದ ಆಡಳಿತ ಅಧಿಕಾರಿ ಎಸ್. ವಿಶ್ವನಾಥ್ ತಿಳಿಸಿದ್ದಾರೆ.

ಶ್ರೀಗಳ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಎಂಟು ಕಡೆ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ವಸ್ತು ಪ್ರದರ್ಶನ ಆವರಣದಲ್ಲಿ ಎರಡು ಕಡೆ, ಉದ್ದಾನ ಶಿವಯೋಗಿಗಳ ಸಮುದಾಯ ಭವನದಲ್ಲಿ, ಸಾರದ ಕೊಪ್ಪಲು, ಹೈಸ್ಕೂಲ್ ಆಟದ ಮೈದಾನ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯಗಳಲ್ಲಿ ಒಂದು ಕಡೆ ವ್ಯವಸ್ಥೆ ಮಾಡಲಾಗಿದ್ದು, ಪ್ರಸಾದ ವಿನಿಯೋಗಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

ಇನ್ನೂ ತುಮಕೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ನಗರದ ಟಿಜಿಎಂಸಿ ಬ್ಯಾಂಕ್ ಮುಂಭಾಗ ವಿಶೇಷವಾಗಿ ಶ್ರೀಗಳ ಪ್ರತಿಮೆಯನ್ನು ಇಡಲಾಗಿದೆ. ಸಂಜೆ 4 ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀಗಳ 112ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಸಮಾರಂಭ, ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಕಾರ್ಯಕ್ರಮ ಜರುಗಲಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಶ್ರೀಗಳ ಭಾವಚಿತ್ರವಿರುವ ಕಟೌಟ್​ಗಳನ್ನು ಹಾಕಲಾಗಿದೆ.

Intro:ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 112ನೇ ಜನ್ಮದಿನೋತ್ಸವದ ಸಮಾರಂಭಕ್ಕಾಗಿ ಸಿದ್ದಗಂಗಾ ಮಠದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

Body:ಶ್ರೀಗಳು ಲಿಂಗೈಕ್ಯರಾದ ನಂತರದ ಮೊದಲನೇ ಹುಟ್ಟುಹಬ್ಬ ಹಾಗೂ ಗುರುವಂದನಾ ಸಮಾರಂಭ ನಡೆಯುತ್ತಿದ್ದು, ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ವೇದಿಕೆ ಬಳಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಜರ್ಮನ್ ಶೈಲಿಯ ವೇದಿಕೆ ಸಿದ್ದವಾಗುತ್ತಿದೆ.
ವೇದಿಕೆಯ ಮೇಲೆ ರಾಜ್ಯದ ವಿವಿಧ ಮಠಾಧೀಶರು ಹಾಗೂ ವೇದಿಕೆಯ ಮುಂಭಾಗ ವಿವಿಧ ಗಣ್ಯರು ಕುಳಿತುಕೊಳ್ಳಲು ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಲಾಗಿದ್ದು, ಅದರ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ ಪ್ರಥಮವಾಗಿ ಕಿರಿಯ ಶ್ರೀಗಳು ಶಿವ ಪೂಜೆಯನ್ನು ಮಾಡಿ, ಏಳು ಗಂಟೆಗೆ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು ಮಹಾಮಂಗಳಾರತಿ ಮೂಲಕ ಲಿಂಗೈಕ್ಯರಾದ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ, ತದನಂತರ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುವುದು.
ಈ ಬಾರಿ ವಿಶೇಷವಾಗಿ 112 ನವಜಾತ ಮಕ್ಕಳಿಗೆ ಶ್ರೀಗಳ ಹೆಸರಿನ ಅಂದರೆ ಶಿವಕುಮಾರ, ಶಿವಣ್ಣ, ಶಿವಯ್ಯ, ಶಿವಮ್ಮ ಹೀಗೆ ನಾಮಕರಣ ಮಾಡಲಾಗುವುದು, ಎಲ್ಲಾ ಮಕ್ಕಳಿಗೂ ತೊಟ್ಟಿಲು, ಶ್ರೀಗಳ ಭಾವಚಿತ್ರವಿರುವ ಬೆಳ್ಳಿಯ ಪದಕ, ಹಾಸಿಗೆ ಹಾಗೂ ಸಿದ್ದಲಿಂಗ ಶ್ರೀಗಳಿಂದ ಆಶೀರ್ವಚನ ನೀಡಲಾಗುವುದು ಎಂದು ಮಠದ ಆಡಳಿತ ಅಧಿಕಾರಿ ಎಸ್ ವಿಶ್ವನಾಥ್ ತಿಳಿಸಿದ್ದಾರೆ.
ಶ್ರೀಗಳ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಎಂಟು ಕಡೆ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ವಸ್ತು ಪ್ರದರ್ಶನ ಆವರಣದಲ್ಲಿ ಎರಡು ಕಡೆ, ಉದ್ದಾನ ಶಿವಯೋಗಿಗಳ ಸಮುದಾಯ ಭವನದಲ್ಲಿ, ಸಾರದ ಕೊಪ್ಪಲು, ಹೈಸ್ಕೂಲ್ ಆಟದ ಮೈದಾನ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯಗಳಲ್ಲಿ ಒಂದು ಕಡೆ ವ್ಯವಸ್ಥೆ ಮಾಡಲಾಗಿದ್ದು, ಪ್ರಸಾದ ವಿನಿಯೋಗಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

Conclusion:ಈ ಎಲ್ಲಾ ಕಾರ್ಯಕ್ರಮಗಳು ಜರುಗಿದರೆ, ಇನ್ನೂ ತುಮಕೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ನಗರದ ಟಿಜಿಎಂಸಿ ಬ್ಯಾಂಕ್ ಮುಂಭಾಗ ವಿಶೇಷವಾಗಿ ಶ್ರೀಗಳ ಪ್ರತಿಮೆಯನ್ನು ಇಡಲಾಗಿದೆ. ಸಂಜೆ 4 ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀಗಳ 112ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಸಮಾರಂಭ, ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಕಾರ್ಯಕ್ರಮ ಜರುಗಲಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಶ್ರೀಗಳ ಭಾವಚಿತ್ರವಿರುವ ಕಟೌಟ್ ಗಳನ್ನು ಹಾಕಲಾಗಿದೆ.

ವರದಿ
ಸುಧಾಕರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.