ETV Bharat / city

ಇಂತಹ ತುರ್ತು ಸಮಯದಲ್ಲಿ ಜನರಿಗೆ ನಿರುದ್ಯೋಗ ಭತ್ಯೆ ನೀಡಬೇಕು: ಸಂಸದ ಡಿ.ಕೆ.ಸುರೇಶ್​​ - ಡಿಕೆ ಸುರೇಶ್​

ಕೊರೊನಾ ಭೀಕರತೆಯಿಂದ ರಾಜ್ಯದಲ್ಲಿ ಜನರು ಕೆಲಸ ಇಲ್ಲದೆ ಖಾಲಿಯಾಗಿದ್ದಾರೆ. ಈ ಸಮಯದಲ್ಲಿ ಸರ್ಕಾರ ನಿರುದ್ಯೋಗಿಗಳಿಗೆ ಸುಮಾರು 8000 ರೂ. ಭತ್ಯೆ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು. ಅಲ್ಲದೆ ಈ ವಿಚಾರ ಕಾಯ್ದೆಯಲ್ಲಿಯೂ ಇದೆ ಎಂದು ಸಂಸದ ಡಿ.ಕೆ.ಸುರೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

dk-suresh-statement-on-unemployment-allowance
ಸಂಸದ ಡಿ.ಕೆ. ಸುರೇಶ್
author img

By

Published : Apr 28, 2020, 3:09 PM IST

ತುಮಕೂರು: ಲಾಕ್​ಡೌನ್​ನಂತಹ ಸಮಯದಲ್ಲಿ ಕೆಲಸ ಇಲ್ಲದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಕಾಯ್ದೆಯಲ್ಲಿದೆ. ಆದ್ರೆ ಗ್ರಾಮೀಣಾಭಿವೃದ್ಧಿ ಸಚಿವರು ಮಾತ್ರ ಕೆಲಸ ಇಲ್ಲದವರಿಗೆ ಪಂಚಾಯಿತಿಗೆ ಹೋಗಿ ಅರ್ಜಿ ಕೊಟ್ಟು ಕೆಲಸ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದ ಡಿ.ಕೆ.ಸುರೇಶ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಪ್ರಪಂಚದಲ್ಲೇ ಉದ್ಭವವಾಗಿರೋ ವಿಭಿನ್ನವಾದ ಸಮಸ್ಯೆ. ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಬಹುದು. ಕನಿಷ್ಠ 8 ಸಾವಿರ ರೂ.ಗಳನ್ನು ಪ್ರತಿ ಕುಟುಂಬಕ್ಕೆ ತಿಂಗಳಿಗೆ ನೀಡಲು ಅವಕಾಶವಿದೆ ಎಂದರು. ಪ್ರತಿ ಕುಟುಂಬಕ್ಕೆ ತಿಂಗಳಿಗೆ 500 ರೂ. ನೀಡಲಾಗುತ್ತಿದೆ. ಇದು ಒಂದು ಕುಟುಂಬ ನಿರ್ವಹಣೆಗೆ ಸಾಕಾಗುವುದೇ ಎಂದು ಪ್ರಶ್ನಿಸಿದರು.

ಕೋವಿಡ್-19 ಸೋಂಕಿನ ವಿಷಯದಲ್ಲಿ ತುಮಕೂರು ಜಿಲ್ಲೆ ಆರೆಂಜ್ ಝೋನ್​ನಲ್ಲಿದೆ. ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಹೋಗದಂತೆ ನೋಡಿಕೊಳ್ಳಬೇಕು. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಒಬ್ಬ ವ್ಯಕ್ತಿಯಿಂದ ಹೇಗೆ ರೋಗ ಹರಡುತ್ತಿದೆ ಎಂಬುದಕ್ಕೆ ಪಾದರಾಯನಪುರ ಸೇರಿದಂತೆ ಹಲವು ಉದಾಹರಣೆಗಳಿವೆ ಎಂದರು. 14, 28 ಅಲ್ಲ 31ನೇ ದಿನಕ್ಕೆ ಕೊರೊನಾ ಸೋಂಕು ಮನುಷ್ಯನಲ್ಲಿ ಪತ್ತೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.