ETV Bharat / city

ಬೆಡ್ ಸಿಗದೆ ಚಿಕಿತ್ಸೆಗಾಗಿ ಸೋಂಕಿತರು ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದಾರೆ: ಡಿಸಿ

author img

By

Published : May 8, 2021, 9:09 AM IST

ಆಕ್ಸಿಜನ್ ಪಡೆದುಕೊಳ್ಳುತ್ತಿರುವವರು ಬಿಡುಗಡೆಯಾದರೆ ಮಾತ್ರ ಬೆಡ್​ಗಳು ಸಿಗುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ತುಮಕೂರು ಜಿಲ್ಲೆಯಲ್ಲಿ 1,900 ಸೋಂಕಿತರು ಆಕ್ಸಿಜನ್ ಬೆಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಹೇಳಿದರು.

Tumkur
ಬೆಡ್ ಸಿಗದೆ ಚಿಕಿತ್ಸೆಗಾಗಿ ಸೋಂಕಿತರು ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದಾರೆ: ಡಿಸಿ ವೈ.ಎಸ್.ಪಾಟೀಲ್

ತುಮಕೂರು: ಬೆಡ್ ಸಿಗದೆ ಬೆಂಗಳೂರಿನಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅವರಲ್ಲಿ ಬಹುತೇಕರು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

ಡಿಸಿ ವೈ.ಎಸ್.ಪಾಟೀಲ್

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಕ್ಸಿಜನ್ ಪಡೆದುಕೊಳ್ಳುತ್ತಿರುವವರು ಬಿಡುಗಡೆಯಾದರೆ ಮಾತ್ರ ಬೆಡ್​ಗಳು ಸಿಗುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಜಿಲ್ಲೆಯಲ್ಲಿ 1,900 ಸೋಂಕಿತರು ಆಕ್ಸಿಜನ್ ಬೆಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 25ರಷ್ಟು ಮಂದಿಯನ್ನು ಆಕ್ಸಿಜನ್ ಬೆಡ್​ಗಳಿಂದ ಬಿಡುಗಡೆ ಮಾಡಿದ್ರೆ, 400 ಮಂದಿ ಹೊಸ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.

ಕೆಲ ಸೋಂಕಿತರು 14 ದಿನಗಳ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಕೆಲವರಿಗೆ ಕೋವಿಡ್​ಗೆ ನೆಗೆಟಿವ್ ಬಂದರೂ ಆಕ್ಸಿಜನ್ ವರದಿ ನೆಗೆಟಿವ್ ಆಗಿರುವುದಿಲ್ಲ. ಅಂತಹವರನ್ನು ಡಿಸ್ಚಾರ್ಜ್ ಮಾಡಿದರೂ ಅವರ ಮನೆಗೆ ಸಿಲಿಂಡರ್ ಕೊಡಬೇಕಿದೆ. ಆದರೆ, ಅಷ್ಟರಮಟ್ಟಿಗೆ ಸಿಲಿಂಡರ್ ಸಂಖ್ಯೆ ಇಲ್ಲದಾಗಿದೆ. ಹೀಗಾಗಿ, ಆಕ್ಸಿಜನ್ ಕಾನ್ಸಂಟ್ರೇಟ್​ ಒಂದು ರೀತಿ ಜೀವ ಕೊಟ್ಟಂತೆ ಆಗುತ್ತದೆ. ಕೇರಳದಲ್ಲಿ ಬಸ್​ಗಳಲ್ಲಿಯೂ ಆಕ್ಸಿಜನ್ ಕಾನ್ಸಂಟ್ರೇಟ್​ ಬಳಸಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿಯೂ ಇದನ್ನು ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಓದಿ: ಸರ್ಕಾರದಿಂದ ಏನೂ ಮಾಡಲು ಸಾಧ್ಯವಿಲ್ಲ.. ದೇವರೇ ಕೊರೊನಾ ತಡೆಯಬೇಕು ಎಂದ ಬಿಜೆಪಿ ಸಂಸದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.