ತುಮಕೂರು : 7 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಮೊಬೈಲ್‌ಗೆ ವ್ಯಾಕ್ಸಿನ್ ಪಡೆದಿರುವುದಾಗಿ ಆರೋಗ್ಯ ಇಲಾಖೆ ಮೆಸೇಜ್ ಕಳಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತುಮಕೂರು ನಗರದ ಸದಾಶಿವನಗರ ಬಡಾವಣೆಯಲ್ಲಿ ವಾಸವಿದ್ದ ಬಸಪ್ಪ ಎಂಬುವರು7 ತಿಂಗಳ ಹಿಂದೆ ಮೃತಪಟ್ಟಿದ್ದರು. ಆದರೆ, 2022ರ ಜನವರಿ 29ರಂದು ಬಸಪ್ಪ ಅವರ ಹೆಸರಿನಲ್ಲಿ ಇದ್ದ ಮೊಬೈಲ್ ನಂಬರ್ಗೆ ವ್ಯಾಕ್ಸಿನ್ ಪಡೆದಿರುವುದಾಗಿ ಮೆಸೇಜ್ ಬಂದಿದೆ. ಅಲ್ಲದೇ ಅವರ ಕುಟುಂಬದ ಇನ್ನೂ ಮೂವರ ಮೊಬೈಲ್‌ಗೆ ವ್ಯಾಕ್ಸಿನ್ ಪಡೆಯದಿದ್ದರೂ ಕೂಡ ಲಸಿಕೆ ಪಡೆಯಲಾಗಿದೆ ಎಂದು ಮೆಸೇಜ್ ಬಂದಿದೆ.
ಇದನ್ನೂ ಓದಿ: ಹೊತ್ತಿ ಉರಿದ ಗುಡಿಸಲು.. ಪ್ರಾಣಾಪಾಯದಿಂದ ಪಾರಾದ ಮಹಿಳೆ!
ಬಸಪ್ಪ ಅವರ ಮಗ ಪಂಚಾಕ್ಷರಯ್ಯ ಆರೋಗ್ಯ ಇಲಾಖೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ