ETV Bharat / city

ಒಳ್ಳೆಯ ಮಾತನಾಡುವಂತೆ ಸಚಿವ ಅಶ್ವತ್ಥ್​ ನಾರಾಯಣಗೆ ಎಳ್ಳು- ಬೆಲ್ಲ ಕಳುಹಿಸಿದ ಕಾಂಗ್ರೆಸ್ಸಿಗರು - ಸಚಿವ ಅಶ್ವತ್ಥ್​ ನಾರಾಯಣಗೆ ಎಳ್ಳು ಬೆಲ್ಲ ಕಳುಹಿಸಿದ ಕಾಂಗ್ರೆಸ್​

ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿ ಕಾರ್ಯಕರ್ತರು ಎಳ್ಳು- ಬೆಲ್ಲದ ಪ್ಯಾಕೆಟ್​ಗಳನ್ನು ಕೈಯಲ್ಲಿ ಹಿಡಿದು ಧಿಕ್ಕಾರ ಕೂಗುವ ಮೂಲಕ, ಬಿಜೆಪಿ ಮುಖಂಡರು ಸಂಸ್ಕೃತಿಯನ್ನು ಕಲಿಯಬೇಕು ಒತ್ತಾಯಿಸಿದರು.

bella
ಸಚಿವ
author img

By

Published : Jan 6, 2022, 4:15 PM IST

ತುಮಕೂರು: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಅವರು ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಟೌನ್​ಹಾಲ್​ ಮುಂದೆ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಸಚಿವರಿಗೆ ಎಳ್ಳು-ಬೆಲ್ಲವನ್ನು ಕಳುಹಿಸಿ 'ಒಳ್ಳೆಯ ಮಾತನಾಡಿ' ಎಂದು ಘೋಷಣೆ ಕೂಗಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರು ಎಳ್ಳು- ಬೆಲ್ಲದ ಪ್ಯಾಕೆಟ್​ಗಳನ್ನು ಕೈಯಲ್ಲಿ ಹಿಡಿದು ಧಿಕ್ಕಾರ ಕೂಗಿದ್ದು, ಬಿಜೆಪಿ ಮುಖಂಡರು ಸಂಸ್ಕೃತಿಯನ್ನು ಕಲಿಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ಎಳ್ಳು-ಬೆಲ್ಲವನ್ನು ಸಚಿವ ಡಾ.ಅಶ್ವತ್ಥ್‌ ನಾರಾಯಣ ಅವರ ಕಚೇರಿಗೆ ಕಳುಹಿಸಿ ಭವಿಷ್ಯದಲ್ಲಿ ಒಳ್ಳೆಯ ಮಾತನ್ನಾಡಿ ಎಂದು ಮನವಿ ಮಾಡದ್ದಾರೆ.

ರಾಜ್ಯದ ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರೊಬ್ಬರು ಅನುಚಿತವಾಗಿ ನಡೆದುಕೊಂಡಿರುವುದು ನಾಚಿಕೆಗೇಡು. ಬಿಜೆಪಿಯಲ್ಲಿದ್ದುಕೊಂಡು ಇಂತಹ ಸಂಸ್ಕೃತಿ ಕಲಿತಿದ್ದಾರೆ ಎಂದು ಕಾಂಗ್ರೆಸ್​ ಮುಖಂಡರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಚಿವ ಸಂಪುಟ ಸಭೆ: ಖ್ಯಾತ ಹಿರಿಯ ನಟ ದಿ. ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.