ತುಮಕೂರು : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 35ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತುಮಕೂರು ತಾಲೂಕು ಉಡಿಗೆರೆ ಬಳಿಯ ವದೇಕಲ್ಲು ಮತ್ತು ಪೆಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.
35 ಮಂದಿಯ ಪೈಕಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇದು ಗೋಲ್ಡನ್ ಸಿಮ್ಸ್ ಫ್ಯಾಕ್ಟರಿಗೆ ಸೇರಿದ ಬಸ್ ಆಗಿದ್ದು, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ನಿತ್ಯ ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಿಂದ ಮಾಕಳಿ ಮತ್ತು ಹೊಸಕೋಟೆ ಭಾಗಕ್ಕೆ ನೌಕರರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ಘಟನೆ ಸಂಬಂಧ ಉಡಿಗೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಇದನ್ನೂ ಓದಿ: ಕನ್ನಡಿಗನಿಗೆ ಜಾಕ್ಪಾಟ್: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್ ಆದ ಮಯಾಂಕ್)