ತುಮಕೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಶಿರಾ ನಗರದ ಇಬ್ಬರು ಯುವಕರಿಗೆ 15 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮಹಮ್ಮದ್ ಅಬುತಹಿರ್ ಹಾಗೂ ಮೆಹಬೂಬ್ ಪಾಷಾ ಎಂಬಿಬ್ಬರು ಉಜ್ಜನಕುಂಟೆ ಬಳಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು.
ಸಾರ್ವಜನಿಕರು ಮೊಬೈಲ್ನಲ್ಲಿ ವಿಡಿಯೋ ಮಾಡಿ ತಾವರೆಕೆರೆ ಪೊಲೀಸರಿಗೆ ಕಳುಹಿಸಿದ್ದರು. ಈ ವಿಡಿಯೋ ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ವ್ಹೀಲಿಂಗ್ ಮಾಡುತ್ತಿದ್ದನ್ನು ಯುವಕರು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಲಯ ದಂಡ ವಿಧಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಲ್ಲದ ವ್ಹೀಲಿಂಗ್ ಪುಂಡರ ಹಾವಳಿ; ಸವಾರರ ಜೀವಕ್ಕೆ ಸಂಚಕಾರ