ತುಮಕೂರು : ಜಿಲ್ಲೆಯ ಸದಾಶಿವನಗರದ ರಿಂಗ್ ರಸ್ತೆಯಲ್ಲಿ ಹಾಡುಹಗಲೇ ಪುಂಡರು ಬೈಕ್ ವ್ಹೀಲಿಂಗ್ ಮಾಡುತ್ತಾ ರಸ್ತೆ ಮೇಲೆ ಓಡಾಡುತ್ತಿದ್ದವರಲ್ಲಿ ಭೀತಿ ಮೂಡಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಸುಮಾರು 4 ಬೈಕ್ಗಳಲ್ಲಿ ಬಂದ ಪುಂಡರು ಮರಳೂರು ಸರ್ಕಲ್ನಿಂದ ಸದಾಶಿವನಗರದ ಎರಡನೇ ಹಂತದ ಸರ್ಕಲ್ವರೆಗೂ ಸತತ ಅರ್ಧ ಗಂಟೆಗೂ ಹೆಚ್ಚು ಕಾಲ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಇನ್ನು ಇದೇ ಸ್ಥಳದಲ್ಲಿ ಪೊಲೀಸರು ಸಂಚರಿಸಿ ಗಸ್ತು ಹಾಕುತ್ತಿದ್ದರೂ ಯಾಮಾರಿಸಿದ್ದಾರೆ.
ಅವರಲ್ಲೇ ಕೆಲವರು ತಮ್ಮ ಮೊಬೈಲ್ಗಳಲ್ಲಿ ವ್ಹೀಲಿಂಗ್ ಮಾಡುವುದನ್ನು ಸೆರೆ ಹಿಡಿಯುತಿದ್ದರು. ಬಳಿಕ ಸಾರ್ವಜನಿಕರು ವಿಡಿಯೋ ಮಾಡುತ್ತಿರುವುದನ್ನು ಗಮನಿಸಿ ತಮ್ಮ ಮುಖ ಮುಚ್ಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವ್ಹೀಲಿಂಗ್ಕ್ ಮಾಡುತ್ತಾ ಪಾದಚಾರಿಗಳಲ್ಲಿ ಭಯವನ್ನು ಉಂಟು ಮಾಡುತ್ತಿರುವ ಇಂತಹ ಪುಂಡರಿಗೆ ಕಠಿಣ ಶಿಕ್ಷೆ ಆಗಬೇಕು. ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.