ETV Bharat / city

ಕೊರೊನಾ ವಿರುದ್ಧದ ಯುದ್ಧದಲ್ಲಿ ಹೋರಾಡಿ ಗೆದ್ದ ತುಮಕೂರಿನ 13 ವರ್ಷದ ಬಾಲಕ!

ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ತುಮಕೂರಿಗೆ ಬಂದಿದ್ದ ವ್ಯಕ್ತಿಯಿಂದ ಬಾಲಕನಿಗೆ ಕೊರೊನಾ ವೈರಸ್​​​ ಹರಡಿತ್ತು. ಈಗ ಆ ಬಾಲಕ ಸಂಪೂರ್ಣ ಗುಣಮುಖನಾಗಿದ್ದಾನೆ. ಆದರೆ, ತಂದೆ ಮೃತಪಟ್ಟಿದ್ದಾರೆ.

13 year old boy cured of Tumkur infected with coronavirus
ಜಿಲ್ಲಾಧಿಕಾರಿ ರಾಕೇಶ್ ಕುಮಾರ್
author img

By

Published : Apr 16, 2020, 6:34 PM IST

ತುಮಕೂರು: ಶಿರಾ ಪಟ್ಟಣದ 13 ವರ್ಷದ ಬಾಲಕ ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಗೆದ್ದು ಬಂದಿದ್ದಾನೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಬಾಲಕ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಎಂದು ತಿಳಿಸಿದರು.

ರೋಗಿ ಸಂಖ್ಯೆ-60ನಿಂದ ಬಾಲಕನಿಗೆ ಸೋಂಕು ತಗುಲಿತ್ತು. ಬಾಲಕನನ್ನು ರೋಗಿ-84 ಎಂದು ಗುರುತಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ಬಾಲಕನನ್ನು ಮನೆಯಲ್ಲಿಯೇ ಮತ್ತೆ 14 ದಿನಗಳ ಕಾಲ ಐಸೋಲೇಷನ್​​​​​ಗೆ ಒಳಪಡಿಸಲಾಗಿದೆ ಎಂದಿದ್ದಾರೆ.

ದೆಹಲಿಯ ನಿಜಾಮುದ್ದೀನ್​ ಸಭೆಯಲ್ಲಿ ಭಾಗವಹಿಸಿದ್ದ ತುಮಕೂರಿನ ಶಿರಾ ವ್ಯಕ್ತಿಯೊಬ್ಬರು (ರೋಗಿ-60) ಈಗಾಗಲೇ ಸೋಂಕು ಪೀಡಿತರಾಗಿ ಮಾರ್ಚ್​​​ 27ರಂದು ಮೃತಪಟ್ಟಿದ್ದಾರೆ. ನಂತರ ಆತನ ಮಗ 13 ವರ್ಷದ ಬಾಲಕನಲ್ಲಿಯೂ ಮಹಾಮಾರಿ ಕಾಣಿಸಿಕೊಂಡಿತ್ತು.

ರೋಗಿ-84 ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದ. ಬಾಲಕನ ಕುಟುಂಬಕ್ಕೂ ಕಟ್ಟುನಿಟ್ಟಾಗಿ ಹೋಮ್​​ ಕ್ವಾರಂಟೈನ್ ಆಗಿರುವಂತೆ ಸೂಚಿಸಲಾಗಿದೆ. ಅಲ್ಲದೆ ಕುಟುಂಬದವರ ಮಾದರಿ ನೆಗೆಟಿವ್ ವರದಿ ಬಂದಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ.

ಅಲ್ಲದೆ ಜಿಲ್ಲೆಯಿಂದ ತಬ್ಲೀಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದ ವ್ಯಕ್ತಿಗಳ ಮಾದರಿಗಳನ್ನು ಕಳುಹಿಸಲಾಗಿದೆ. ಆ ವರದಿಗಾಗಿ ಕಾಯುತ್ತಿದ್ದೇವೆ. ಮೇ 3ರವರೆಗೂ ಲಾಕ್​​​ಡೌನ್ ಜಿಲ್ಲೆಯಲ್ಲಿ ಮುಂದುವರೆಯಲಿದೆ. ಅಲ್ಲಿಯವರೆಗೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.