ETV Bharat / city

ಶಿವಮೊಗ್ಗ: ಮಾರ್ಚ್ 6 ರಿಂದ ನಾಲ್ಕು ದಿನಗಳ ಕಾಲ ಮಹಿಳಾ ರಂಗೋತ್ಸವ ಆಯೋಜನೆ - Women's Rangotsav function

ಮಹಿಳೆಯರನ್ನು ರಂಗಭೂಮಿಯತ್ತ ಸೆಳೆದು ಕನ್ನಡ ರಂಗಭೂಮಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾರ್ಚ್ 6 ರಿಂದ 9 ರವರೆಗೆ ನಾಲ್ಕು ದಿನಗಳ ಮಹಿಳಾ ರಂಗೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಮಹಿಳಾ ರಂಗೋತ್ಸವ
ಮಹಿಳಾ ರಂಗೋತ್ಸವ
author img

By

Published : Mar 4, 2021, 9:02 AM IST

ಶಿವಮೊಗ್ಗ: ಶಿವಮೊಗ್ಗ ರಂಗಾಯಣ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಮಾರ್ಚ್ 6 ರಿಂದ 9 ರವರೆಗೆ ನಾಲ್ಕು ದಿನಗಳ ಕಾಲ ಮಹಿಳಾ ನಾಟಕೋತ್ಸವ ‘ಜೀವನ್ಮುಖಿ’ ಆಯೋಜಿಸಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದರು.

ಮಹಿಳಾ ರಂಗೋತ್ಸವ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ ಸಂದೇಶ್ ಜವಳಿ

ಮಹಿಳೆಯರನ್ನು ರಂಗಭೂಮಿಯತ್ತ ಸೆಳೆದು ಕನ್ನಡ ರಂಗಭೂಮಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನಗಳ ಉತ್ಸವದಲ್ಲಿ ಮಹಿಳಾ ವಿಚಾರಗಳನ್ನು ಪ್ರಧಾನವಾಗಿ ಹೊಂದಿರುವ ಅತ್ಯುತ್ತಮ ನಾಟಕಗಳ ಪ್ರದರ್ಶನ, ಏಕವ್ಯಕ್ತಿ ರಂಗ ಪ್ರಯೋಗ, ವಿಚಾರಗೋಷ್ಠಿ ಮತ್ತು ರಂಗ ಗೀತೆಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಮಾರ್ಚ್ 6 ರಂದು ಶನಿವಾರ ಖ್ಯಾತ ವೈದ್ಯೆ ರಜನಿ.ಎ.ಪೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೇಯರ್ ಸುವರ್ಣ ಶಂಕರ್, ರಂಗ ಸಮಾಜ ಸದಸ್ಯ ಆರ್.ಎಸ್.ಹಾಲಸ್ವಾಮಿ ಭಾಗವಹಿಸುವರು. ಉದ್ಘಾಟನಾ ಸಮಾರಂಭದ ನಂತರ ರಂಗ ಕಲಾವಿದೆ ಗಾಯಕಿ ಸವಿತಕ್ಕ ಅವರು ಅಭಿನಯಿಸಿದ ‘ಉಧೋ ಉಧೋ ಎಲ್ಲವ್ವ’ ಮತ್ತು ಮಾರ್ಚ್ 7 ರಂದು ಭಾನುವಾರ ಸಂಜೆ 6.30 ಕ್ಕೆ ‘ಗುಲಾಬಿ ಗ್ಯಾಂಗ್-ಭಾಗ 01’ ನಾಟಕ ಪ್ರದರ್ಶನ ನಡೆಯಲಿದೆ.

ಮಾರ್ಚ್ 8 ರಂದು ಸೋಮವಾರ ಬೆಳಗ್ಗೆ 10.15 ರಿಂದ ಕನ್ನಡರಂಗ ಭೂಮಿಯಲ್ಲಿ ಮಹಿಳೆಯರು 'ಅಂದು ಮತ್ತು ಇಂದು’ ಎಂಬ ವಿಚಾರದ ಕುರಿತು ಸಂವಾದ ಏರ್ಪಡಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಹೆಗ್ಗೋಡಿನ ರಂಗಕರ್ಮಿ ವಿದ್ಯಾ ಹೆಗಡೆ ಭಾಗವಹಿಸಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಖ್ಯಾತ ನೃತ್ಯ ಕಲಾವಿದೆ ಮತ್ತು ಮನೋವೈದ್ಯರಾದ ಡಾ.ಕೆ.ಎಸ್.ಪವಿತ್ರ ವಹಿಸುವರು. ವಿಚಾರಗೋಷ್ಠಿಯ ನಂತರ ಯುವ ರಂಗಕರ್ಮಿ ಕು.ಮೇದಿನಿ ಕೆಳಮನೆ ಇವರು ನಿರ್ದೇಶಿಸಿದ, ವೈದೇಹಿ ಕಥೆ ಆಧಾರಿತ ‘ದಾಳಿ’ ಕಿರು ಚಲನಚಿತ್ರ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 12.30 ರಿಂದ 1.30 ರವರೆಗೆ ಶಿವಮೊಗ್ಗದ ಮಧುರ ಕಲಾವೃಂದ ವತಿಯಿಂದ ಗಾಯಕಿ ನಾಗರತ್ನ ನೇತೃತ್ವದಲ್ಲಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಜೆ 6.30 ರಿಂದ ಗುಲಾಬಿ ಗ್ಯಾಂಗ್ ಭಾಗ-02 ನಾಟಕ ಪ್ರದರ್ಶನವಿರುತ್ತದೆ ಎಂದರು.

ಇನ್ನು ಮಾರ್ಚ್ 9ರಂದು ಮಂಗಳವಾರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಎಂ.ಎಲ್.ವೈಶಾಲಿ ಮತ್ತು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಭಾಗವಹಿಸುವರು. ಸಭಾ ಕಾರ್ಯಕ್ರಮದ ನಂತರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ವತಿಯಿಂದ ನೃತ್ಯಗುರು ಸಹನಾ ಚೇತನ್ ನಿರ್ದೇಶನದಲ್ಲಿ ಡಾ.ಎ.ಜಿ.ಗೋಪಾಲಕೃಷ್ಣ ಕೊಳ್ತಾಯ ರಚನೆಯ ಶರಣೆ ಅಕ್ಕಮಹಾದೇವಿಯ ಜೀವನಗಾಥೆಯ ‘ದಾಕ್ಷಿಣಾತ್ಯ ತಪಸ್ವಿನಿ’ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ.

ಇನ್ನು ಮಹಿಳಾ ರಂಗೋತ್ಸವದ ಪ್ರತಿ ನಾಟಕ ನಾಟಕ ಪ್ರದರ್ಶನಕ್ಕೆ 30 ರೂ. ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಸಂದೇಶ್ ಜವಳಿ ಮನವಿ ಮಾಡಿದರು. ಈ ವೇಳೆ ರಂಗಸಮಾಜ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.